Advertisement

Euro Cup ಫುಟ್‌ಬಾಲ್‌ : ಸ್ಪೇನ್‌ಗೆ 4ನೇ ಪ್ರಶಸ್ತಿ

11:56 PM Jul 15, 2024 | Team Udayavani |

ಬರ್ಲಿನ್‌: ದಾಖಲೆ 4ನೇ ಬಾರಿಗೆ ಯುರೋ ಕಪ್‌ ಫುಟ್‌ಬಾಲ್‌ ಪ್ರಶಸ್ತಿಯನ್ನು ಗೆದ್ದ ಸ್ಪೇನ್‌ “ಕಿಂಗ್‌ ಆಫ್ ಯುರೋಪಿಯನ್‌ ಸಾಕರ್‌’ ಎಂಬ ಹಿರಿಮೆಗೆ ಪಾತ್ರವಾಗಿದೆ. ಬರ್ಲಿನ್‌ನಲ್ಲಿ ನಡೆದ ಫೈನಲ್‌ನಲ್ಲಿ ಸ್ಪ್ಯಾನಿಶ್‌ ಪಡೆ ಇಂಗ್ಲೆಂಡ್‌ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತು.
ಸ್ಪೇನ್‌ ಪರ ನಿಕೋ ವಿಲಿಯಮ್ಸ್‌ 47ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. 73ನೇ ನಿಮಿಷದಲ್ಲಿ ಇಂಗ್ಲೆಂಡ್‌ನ‌ ಕೋಲ್‌ ಪಾಮರ್‌ ಪಂದ್ಯ ವನ್ನು ಸಮಬಲಕ್ಕೆ ತಂದರು. ಸ್ಪೇನ್‌ನ ಗೆಲುವಿನ ಗೋಲು 86ನೇ ನಿಮಿಷ ದಲ್ಲಿ ಮೈಕಲ್‌ ಒಯರ್ಝಬಾಲ್‌ ಅವರಿಂದ ಸಿಡಿಯಿತು.

Advertisement

ಬ್ಯಾಕ್‌ಅಪ್‌ ಸ್ಟ್ರೈಕರ್‌ ಆಗಿರುವ ಒಯರ್ಝಬಾಲ್‌ ನಾಯಕ ಅಲ್ವಾರೊ ಮೊರಾಟ ಅವರಿಗೆ ಬದಲಿ ಯಾಗಿ ಆಡಲಿಳಿದಿದ್ದರು. ಇವರ ಪರಾಕ್ರಮದಿಂದ ಪಂದ್ಯ ಹೆಚ್ಚುವರಿ ಅವಧಿ ಯತ್ತ ಹೊರಳು ವುದು ತಪ್ಪಿತು.

ಈ ಸೋಲು ಇಂಗ್ಲೆಂಡ್‌ನ‌ ದುರ ದೃಷ್ಟ ವನ್ನು ಮತ್ತೆ ತೆರೆದಿರಿಸಿತು. 1996ರ ವಿಶ್ವಕಪ್‌ ಗೆಲುವಿನ ಬಳಿಕ ಅದು ಯಾವುದೇ ಪ್ರಮುಖ ಕೂಟಗಳಲ್ಲಿ ಚಾಂಪಿಯನ್‌ ಆಗಿಲ್ಲ.

ಸರ್ವಾಧಿಕ 15 ಗೋಲು
ಸ್ಪೇನ್‌ ಇದಕ್ಕೂ ಮುನ್ನ 1964, 2008 ಮತ್ತು 2012ರಲ್ಲಿ ಯೂರೋಪಿ ಯನ್‌ ಚಾಂಪಿಯನ್‌ ಎನಿಸಿ ಕೊಂಡಿತ್ತು. ಈ ಬಾರಿ ಎಲ್ಲ 7 ಪಂದ್ಯ ಗಳನ್ನು ಗೆದ್ದು ಪಾರಮ್ಯ ಸಾಧಿ ಸುವ ಜತೆಗೆ, ಕೂಟವೊಂದರಲ್ಲಿ ಸರ್ವಾಧಿಕ 15 ಗೋಲು ಬಾರಿಸಿದ ದಾಖಲೆ ಯನ್ನೂ ಸ್ಥಾಪಿಸಿತು.
ಚಾಂಪಿಯನ್‌ ಆದೊಡನೆಯೇ ಸ್ಪೇನ್‌ ಫ‌ುಟ್ಬಾಲಿಗರೆಲ್ಲ “ಕಿಂಗ್ಸ್‌ ಆಫ್ ಯೂರೋಪ್‌’ ಎಂದು ಬರೆದ ಜೆರ್ಸಿಯನ್ನು ಧರಿಸಿ ವಿಜಯೋತ್ಸವ ಆಚರಿ ಸಿದರು. ಜೆರ್ಸಿಯ ಹಿಂದೆ “4′ ಎಂದು ಬರೆದಿತ್ತು.

ಸ್ಪೇನ್‌ಗೆ ಅವಳಿ ಸಂಭ್ರಮ
ಜು. 14ರ ರವಿವಾರ ಸ್ಪೇನ್‌ ಪಾಲಿಗೆ ಅವಳಿ ಕ್ರೀಡಾ ಸಂಭ್ರಮದ ದಿನವಾಗಿತ್ತು. ಸ್ಪೇನ್‌ ಯೂರೋ ಕಪ್‌ ಗೆಲ್ಲುವ ಕೆಲವೇ ಗಂಟೆಗಳ ಮೊದಲು ಕಾರ್ಲೋಸ್‌ ಅಲ್ಕರಾಜ್‌ ವಿಂಬಲ್ಡನ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಮ್ಯಾಡ್ರಿಡ್‌ನ‌ ದೈತ್ಯ ಪರದೆಯಲ್ಲಿ ಈ ಎರಡೂ ಗೆಲುವನ್ನು ಕಂಡ ಸ್ಪೇನ್‌ ಕ್ರೀಡಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

Advertisement

6 ಮಂದಿಗೆ ಗೋಲ್ಡನ್‌ ಬೂಟ್‌!
ಯುರೋ ಕಪ್‌ 2024ರ ಗೋಲ್ಡನ್‌ ಬೂಟ್‌ ಪ್ರಶಸ್ತಿಯನ್ನು 6 ಆಟಗಾರರು ಹಂಚಿಕೊಂಡರು. ಇವರೆಲ್ಲರೂ ತಲಾ 3 ಗೋಲು ಬಾರಿಸಿದ್ದರು. ಇವರೆಂದರೆ ಸ್ಪೇನ್‌ನ ಡ್ಯಾನಿ ಒಲ್ಮೊ, ಜಾರ್ಜಿಯಾದ ಜಾರ್ಜಸ್‌ ಮಿಕೌಟೇಝ್, ನೆದರ್ಲೆಂಡ್ಸ್‌ನ ಗೋಡಿ ಗಪ್ಕೊ, ಸ್ಲೊವಾಕಿಯಾದ ಇವಾನ್‌ ಶ್ರಾಂಝ್, ಜರ್ಮನಿಯ ಜಮಾಲ್‌ ಮುಸಿಯಾಲ ಮತ್ತು ಇಂಗ್ಲೆಂಡ್‌ನ‌ ಹ್ಯಾರಿ ಕೇನ್‌.

Advertisement

Udayavani is now on Telegram. Click here to join our channel and stay updated with the latest news.

Next