Advertisement

Women’s Asia Cup: ಮಲೇಷ್ಯಾ ವಿರುದ್ಧ ಥೈಲ್ಯಾಂಡ್‌ಗೆ 22 ರನ್‌ ಜಯ

10:24 PM Jul 20, 2024 | Team Udayavani |

ದಂಬುಲಾ: ಇಲ್ಲಿ ನಡೆದ ವನಿತಾ ಏಷ್ಯಾಕಪ್‌ 3ನೇ ಟಿ20 ಪಂದ್ಯದಲ್ಲಿ ಮಲೇಷ್ಯಾ ವಿರುದ್ದ ಥೈಲ್ಯಾಂಡ್‌ ತಂಡ 22 ರನ್‌ಗಳ ಜಯ ಗಳಿಸಿದೆ. ಇದು ಥೈಲ್ಯಾಂಡ್‌ಗೆ ಕೂಟದಲ್ಲಿ ಲಭಿಸಿದ ಮೊದಲನೇ ಗೆಲುವು.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಥೈಲ್ಯಾಂಡ್‌, 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 133 ರನ್‌ ಬಾರಿಸಿತ್ತು. ನಟಾಯ ಬೂಚಾತಮ್‌ 18, ನನಪಟ್‌ ಕೊಂಚರೊಯೆಂಕಾಯಿ 40 ರನ್‌ ಸಿಡಿಸಿ ತಂಡದ ಮೊತ್ತ ಏರಿಸುವಲ್ಲಿ ನೆರವಾದರು.

ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್‌ ಮಾಡಿದ ಮಲೇಷ್ಯಾ, 20 ಓವರ್‌ ಮುಕ್ತಾಯಕ್ಕೆ 8 ವಿಕೆಟ್‌ ಕಳೆದುಕೊಂಡು 111 ರನ್‌ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ವಾನ್‌ ಜುಲಿಯಾ 52 ರನ್‌ ಸಿಡಿಸಿ ಹೋರಾಟ ನಡೆಸಿದ್ದರಾದರೂ ಉಳಿದ ಬ್ಯಾಟರ್‌ಗಳ ಬೆಂಬಲವಿಲ್ಲದೆ ತಂಡ ಸೋಲೊಪ್ಪಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next