Advertisement

Mumbai Airportನಲ್ಲಿ 40 ಕೋಟಿ ರೂ. ಮೌಲ್ಯದ ಕೋಕೆನ್‌ ವಶ; ಥಾಯ್‌ ಯುವತಿ ಬಂಧನ

12:23 PM Jan 12, 2024 | Team Udayavani |

ಮುಂಬೈ(ಮಹಾರಾಷ್ಟ್ರ): ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಕೋಕೆನ್‌ ಕಳ್ಳಸಾಗಣೆ ಮಾಡುತ್ತಿದ್ದ ಥಾಯ್‌ ಯುವತಿ(21ವರ್ಷ)ಯನ್ನು ಡೈರೆಕ್ಟರೇಟ್‌ ಆಫ್‌ ರೆವಿನ್ಯೂ ಇಂಟೆಲಿಜೆನ್ಸ್‌ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಘಟನೆ ನಡೆದಿದೆ.

Advertisement

ಖಚಿತ ಮಾಹಿತಿ ಮೇರೆಗೆ ಡೈರೆಕ್ಟರೇಟ್‌ ಆಫ್‌ ರೆವಿನ್ಯೂ ಇಂಟೆಲಿಜೆನ್ಸ್‌ ನಡೆಸಿದ ಕಾರ್ಯಾಚರಣೆಯಲ್ಲಿ ಅಡ್ಡೀಸ್‌ ಅಬಾಬಾದಿಂದ ವಿಮಾನದಲ್ಲಿ ಆಗಮಿಸಿದ್ದ ಯುವತಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಡಿಆರ್‌ ಐ ಮಾಹಿತಿ ಪ್ರಕಾರ, ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರಯಾಣಿಕರನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಗಿತ್ತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲವಾಗಿತ್ತು. ಆದರೆ ಥಾಯ್‌ ಯುವತಿಯ ಟ್ರಾಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಚಿಕ್ಕ, ಚಿಕ್ಕ ಪ್ಯಾಕೇಟ್‌ ಗಳಲ್ಲಿ ಅಡಗಿಸಿಟ್ಟಿದ್ದ ಕೋಕೆನ್‌ ಪೌಡರ್‌ ಪತ್ತೆಯಾಗಿತ್ತು. ಪೌಡರ್‌ ಪರೀಕ್ಷಿಸಿದಾಗ ಇದು ಕೋಕೆನ್‌ ಎಂಬುದು ದೃಢಪಟ್ಟಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ಮೌಲ್ಯ 40 ಕೋಟಿ ರೂಪಾಯಿಯಾಗಿದೆ ಎಂದು ವಿವರಿಸಿದೆ.

ಬಂಧಿತ ಯುವತಿಯ ವಿರುದ್ಧ ಎನ್‌ ಡಿಪಿಎಸ್‌ (Narcotic drugs and psychotropic substances) ಕಾಯ್ದೆ ಪ್ರಕಾರ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಆರ್‌ ಐ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next