Advertisement

ಬಣ್ಣ ಬಣ್ಣಗಳ ಮೋಡಿಗಾರ

12:30 AM Jan 01, 2019 | |

ಬಟ್ಟೆಯೊಂದರ ಮಧ್ಯೆ ಕಾಣುವ ಯಾವುದೋ ಬರಹ, ಬಟ್ಟೆಯ ಆಕರ್ಷಣೆ ಹೆಚ್ಚಿಸುವ ವರ್ಣ ಸಂಯೋಜನೆ, ಎಡ ಅಥವಾ ಬಲಬದಿಯಲ್ಲಿ ಕಾಣುವ ವಿಶಿಷ್ಟ ವಿನ್ಯಾಸಕ್ಕೆ ಮರುಳಾಗಿಯೇ ಆ ದಿರಿಸು ಖರೀದಿಸುವ ಜನರಿದ್ದಾರೆ. ಬಟ್ಟೆಯೊಂದಕ್ಕೆ ಇಂಥ ಮಾಂತ್ರಿಕ ಸ್ಪರ್ಶ ನೀಡುವವರೇ ಟೆಕ್ಸ್‌ಟೈಲ್‌ ಡಿಸೈನರ್‌ಗಳು…

Advertisement

ಕರವಸ್ತ್ರ, ಕಾಲು ಚೀಲ, ಅಂಗಿ ಇವೆಲ್ಲವೂ ಯಾವುದೋ ಒಂದು ಕಾರಣಕ್ಕೆ ನಮಗಿಷ್ಟವಾಗಿಬಿಡುತ್ತದೆ. ನೂರಾರು ದಿರಿಸುಗಳ ನಡುವೆ ಒಂದು ನಮ್ಮ ಗಮನ ಸೆಳೆದು ಹತ್ತಿರಕ್ಕೆ ಕರೆಯುತ್ತದೆ. ಬಣ್ಣ, ವಿನ್ಯಾಸ ಅಥವಾ ಬಟ್ಟೆಯ ಮಟೀರಿಯಲ್‌, ಎಲ್ಲವೂ ಸೇರಿ ಬಟ್ಟೆಗೆ ಒಂದು ವ್ಯಕ್ತಿತ್ವವನ್ನು ದಯಪಾಲಿಸಿರುತ್ತವೆ. ಇದು ಟೆಕ್ಸ್‌ಟೈಲ್‌ ಡಿಸೈನರ್‌ನ ಕೆಲಸ. ದಿನನಿತ್ಯದ ಬಳಕೆಯ ಉಡುಗೆಗಳಲ್ಲದೆ, ಕಾರ್ಖಾನೆಗಳಲ್ಲಿ ತಂತ್ರಜ್ಞರಿಗೆ ಅನುಕೂಲಕ್ಕೆ ತಕ್ಕ ಸಮವಸ್ತ್ರಗಳು, ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಗಳು ಧರಿಸುವ ಹೈಜೀನಿಕ್‌ ಗೌನು, ಮಾಸ್ಕ್, ಅಷ್ಟೇ ಯಾಕೆ? ಸಿನಿಮಾ ಮಂದಿರಗಳಲ್ಲಿ ಗೋಡೆಯನ್ನು ಸೌಂಡ್‌ ಪ್ರೂಫ್ ಮಾಡಲು ಹೊದಿಸುವ ಮೇಲಣ ಹೊದಿಕೆ ಕೂಡಾ ಟೆಕ್ಸ್‌ಟೈಲ್‌ ಡಿಸೈನರ್‌ಗಳ ಕೊಡುಗೆಯೇ. 

ವಸ್ತ್ರ ವಿನ್ಯಾಸಕ ಅಂದರೆ ಯಾರು?
ಟೆಕ್ಸ್‌ಟೈಲ್‌ ಡಿಸೈನರ್‌ ಕೇವಲ ವಿನ್ಯಾಸದ ಕಡೆ ಮಾತ್ರ ಗಮನ ಹರಿಸುವುದಿಲ್ಲ. ಬಟ್ಟೆಯ ಉತ್ಪಾದನೆಯ ಪ್ರಕ್ರಿಯೆಯಲ್ಲಿಯೂ ತೊಡಗಿಕೊಳ್ಳುತ್ತಾನೆ. ಡೈಗಳು, ನೂಲಿನ ಸಾಂದ್ರತೆ, ಗುಣ, ಬಟ್ಟೆಯ ಗುಣಸ್ವಭಾವ ಎಲ್ಲವನ್ನೂ ಅವರು ಅರಿತಿರಬೇಕಾಗುತ್ತದೆ. ಅದಲ್ಲದೆ, ಅವನಿಗೆ ಅನೇಕ ಸಾಫ್ಟ್ವೇರ್‌ಗಳ ಬಳಕೆ ಬಗ್ಗೆಯೂ ಗೊತ್ತಿರಬೇಕಾಗುತ್ತದೆ. ಇಂದು ಟೆಕ್ಸ್‌ಟೈಲ್‌ ಡಿಸೈನರ್‌ಗಳು CAD (Computer Aided Software), ಆರ್ಟ್‌ಲೆಂಡಿಯಾ ಸಿಮ್ಮೆಟ್ರಿ ವರ್ಕ್ಸ್, ಅಡೋಬ್‌ ಇಲ್ಲಸ್ಟ್ರೇಟರ್‌, ಬಾಂಟೆಕ್ಸ್‌, ಟೆಕ್ಸ್‌ಟೈಲ್‌ CAD, ಎವೆಲ್ಯೂಷನ್‌ ಟೆಕ್ಸ್‌ಟೈಲ್‌ ಡಿಸೈನ್‌ ಸಾಫ್ಟ್ವೇರ್‌ ಮುಂತಾದ ಸಾಫ್ಟ್ವೇರ್‌ಗಳನ್ನು ಬಳಸುತ್ತಿದ್ದಾರೆ. ತಂತ್ರಜ್ಞಾನದ ಬಳಕೆ ಗೊತ್ತಿದ್ದವರಿಗೆ ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚು. 

ಶಿಕ್ಷಣ ಹೇಗಿರುತ್ತೆ?
ಈ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರು ಡಿಪ್ಲೋಮಾ ಇನ್‌ ಫ್ಯಾಷನ್‌, ಟೆಕ್ಸ್‌ಟೈಲ್‌ ಆಯಂಡ್ ಅಪಾರೆಲ್ಸ್‌ ಕೋರ್ಸನ್ನು ಆರಿಸಿಕೊಳ್ಳಬಹುದು. ಪದವಿ ಮಟ್ಟದಲ್ಲಿ ಟೆಕ್ಸ್‌ಟೈಲ್‌ ಕ್ಷೇತ್ರದ ಪ್ರಾಥಮಿಕ ಅಂಶಗಳ ಅರಿವು ನೀಡಲಾಗುತ್ತದೆ. ಬಟ್ಟೆಗಳ ಸ್ವಭಾವ, ಬಣ್ಣಗಳ ಪರಿಚಯ, ಬಳಕೆ, ಟೆಕ್ಸ್‌ಟೈಲ್‌ನ ಚರಿತ್ರೆ, ಕ್ಷೇತ್ರದ ಸೂಕ್ಷ್ಮ ತಿಳಿವಳಿಕೆ- ಇವಿಷ್ಟೂ ಪದವಿ ಹಂತದಲ್ಲಿ ಕಲಿಸಲಾಗುವುದು. ಇಲ್ಲಿನ ಸ್ಟುಡಿಯೋ ತರಗತಿಗಳಲ್ಲಿ ಪ್ರಾಯೋಗಿಕ (Hands on) ತರಬೇತಿ ನೀಡಲಾಗುವುದು. ರೇಶ್ಮೆ, ಹತ್ತಿ, ಉಣ್ಣೆ, ಹೆಣಿಗೆ, ಬೇರೆ ಬೇರೆ ಮೇಲ್ಮೆ„ಯ ಮೇಲೆ ಮುದ್ರಣಗೊಂಡ ಡಿಸೈನ್‌ಗಳು ಅಂತಿಮವಾಗಿ ಹೇಗೆ ಕಾಣಬಹುದು ಎಂದು ವಿದ್ಯಾರ್ಥಿಗಳು ಕಲಿಯುತ್ತಾರೆ. ಹೆಚ್ಚಿನ ವ್ಯಾಸಂಗ ಮಾಡಲಿಚ್ಛಿಸುವವರು ಮಾಸ್ಟರ್ ಪದವಿಯನ್ನೂ ಆಯ್ಕೆ ಮಾಡಬಹುದು.

ಬಯೊಟೆಕ್ಸ್‌ಟೈಲ್ಸ್‌ ಎಂಬ ರೋಚಕ ವಿಭಾಗ
ಟೆಕ್ಸ್‌ಟೈಲ್‌ ಡಿಸೈನಿಂಗ್‌ ಕ್ಷೇತ್ರದಲ್ಲಿಯೇ “ಬಯೊ ಟೆಕ್ಸ್‌ಟೈಲ್ಸ್‌’ ಬಹಳ ರೋಚಕ ವಿಭಾಗ. ವಿಜ್ಞಾನ, ಮೆಡಿಕಲ್‌ ಮುಂತಾದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವವರು ತೊಡುವ ಉಡುಗೆಗಳನ್ನು ವಿಶೇಷವಾಗಿ ತಯಾರಿಸಿರಬೇಕಾಗುತ್ತದೆ. ಅಲ್ಲಿನ ಕೆಲಸದ ವಾತಾವರಣವನ್ನು ಗಮನದಲ್ಲಿರಿಸಿಕೊಂಡು, ಕೆಲಸಗಾರರ ಕಂಫ‌ರ್ಟ್‌ ಅನ್ನೂ ಗಮನದಲ್ಲಿರಿಕೊಂಡು ಉಡುಪುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಉದಾಹರಣೆಗೆ, ಬ್ಯಾಂಡೇಜ್‌, ಗಾಯದ ಶುಶ್ರೂಷೆಗೆ ಬಳಸುವ ಬಟ್ಟೆ ಇವೆಲ್ಲದರ ಕುರಿತು ಬಯೋ ಟೆಕ್ಸ್‌ಟೈಲ್ಸ್‌ನಲ್ಲಿ ಕಲಿಸಲಾಗುತ್ತದೆ. ಟೆಕ್ಸ್‌ಟೈಲ್‌ ಕ್ಷೇತ್ರದಲ್ಲಿ ಬಯೋಟೆಕ್ಸ್‌ಟೈಲ್‌ ವಿಭಾಗಕ್ಕೆ ಹೆಚ್ಚಿನ ಮನ್ನಣೆ ಇದೆ. 

Advertisement

ಅವಕಾಶ ಎಲ್ಲೆಲ್ಲಿ?
ಖಾಸಗಿ ಕಂಪನಿಗಳಲ್ಲಿ ಮಾತ್ರವಲ್ಲದೆ ಸ್ವಂತ ಉದ್ದಿಮೆಯನ್ನೂ ಟೆಕ್ಸ್‌ಟೈಲ್‌ ಡಿಸೈನರ್‌ಗಳು ಮಾಡಬಹುದು. ಕ್ವಾಲಿಟಿ ಅಶುರೆನ್ಸ್‌ ಇನ್ಸ್‌ಪೆಕ್ಟರ್‌, ಫ್ರೀಲ್ಯಾನ್ಸ್‌ ಟೆಕ್ಸ್‌ಟೈಲ್‌ ಆರ್ಟಿಸ್ಟ್‌, ಹೋಮ್‌ ಫ‌ರ್ನಿಷಿಂಗ್ಸ್‌ ಟೆಕ್ಸ್‌ಟೈಲ್‌ ಡಿಸೈನ್‌, ಪ್ರಾಡಕ್ಟ್ ಡೆವಲಪರ್‌ ಫಾರ್‌ ಇಂಟೀರಿಯರ್‌ ಡಿಸೈನ್‌, ಫ್ಯಾಶನ್‌ ಟೆಕ್ಸ್‌ಟೈಲ್‌ ಡಿಸೈನರ್‌ ಮುಂತಾದವು ಈ ಕ್ಷೇತ್ರದ ಪದವೀಧರರು ಕೆಲಸ ನಿರ್ವಹಿಸುವ ಹುದ್ದೆಗಳು. ಸ್ನಾತಕೋತ್ತರ ಪದವಿ ಪಡೆದವರು ಟೆಕ್ಸ್‌ಟೈಲ್‌ ಪೊ›ಡಕ್ಷನ್‌ ಮ್ಯಾನೇಜರ್‌, ರಿಸರ್ಚ್‌ ಆಂಡ್‌ ಡೆವಲೆಪ್‌ಮೆಂಟ್‌ ಅನಾಲಿಸ್ಟ್‌, ಟೆಕ್ಸ್‌ಟೈಲ್‌ ಸಪ್ಲೆ„ ಚೈನ್‌ ಮ್ಯಾನೇಜರ್‌, ಟೆಕ್ಸ್‌ಟೈಲ್‌ ಮಾರ್ಕೆಟಿಂಗ್‌ ಮ್ಯಾನೇಜರ್‌ ಹುದ್ದೆಗೇರಬಹುದು.

ಪ್ರೊ. ರಘು .ವಿ.

Advertisement

Udayavani is now on Telegram. Click here to join our channel and stay updated with the latest news.

Next