Advertisement

ಮೆದುಳಿಗೆ ಹಾನಿ ಮಾಡುವ ಅಮೀಬಾ: ಟೆಕ್ಸಾಸ್‌ನಲ್ಲಿ ಅಲರ್ಟ್‌

01:24 AM Sep 30, 2020 | mahesh |

ಟೆಕ್ಸಾಸ್‌: ಅಮೆರಿಕದಲ್ಲಿ ಕೋವಿಡ್ ಆತಂಕದ ನಡುವೆಯೇ ಹೊಸತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಟೆಕ್ಸಾಸ್‌ನಲ್ಲಿ ಪೂರೈಕಯಾಗುವ ಕುಡಿಯುವ ನೀರಿನಲ್ಲಿ ಮೆದುಳಿಗೆ ಹಾನಿ ಮಾಡುವ ಅಮೀಬಾ ಪತ್ತೆಯಾಗಿದೆ.

Advertisement

ಇದರಿಂದಾಗಿ ಬಾಲಕ ನೊಬ್ಬ ಅಸುನೀಗಿದ್ದು, ಪ್ರಾಂತೀಯ ಸರಕಾರವು ಕಟ್ಟೆಚ್ಚರ ಘೋಷಿ ಸಿದೆ. ಜತೆಗೆ ಬಾಲಕನ ಸಾವಿನ ಬಗ್ಗೆ ತನಿಖೆ ನಡೆಸು ವಂತೆಯೂ ಗವರ್ನರ್‌ ಸೂಚಿಸಿದ್ದಾರೆ. ಬಾಲಕನ ಮನೆಗೆ ಪೂರೈಕೆಯಾಗಿ ರುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದಾಗ ಅದರಲ್ಲಿ ಹಾನಿಕಾರಕ ಅಮೀಬಾ ಇರುವುದು ಪತ್ತೆಯಾಗಿದೆ. ಟೆಕ್ಸಾಸ್‌ನ ಪರಿಸರ ಗುಣಮಟ್ಟ ಕಾಪಾಡುವ ಆಯೋಗ ಜನರಿಗೆ ಮನವಿ ಮಾಡಿ, ಸ್ನಾನ ಮಾಡುವ ವೇಳೆ ನೀರು ಮೂಗಿನೊಳಕ್ಕೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ. ಜತೆಗೆ ಶವರ್‌, ಟ್ಯಾಪ್‌ಗ್ಳನ್ನು ತಿರುಗಿಸಿ, ಸ್ವಲ್ಪ ಸಮಯ ನೀರು ಹರಿದ ನಂತರವೇ ಬಳಕೆ ಮಾಡಬೇಕೆಂದು ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next