Advertisement
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿಯೂ ಮಾರಣಾಂತಿಕ ಅಮೀಬಾಕ್ಕೆ ಬಾಲಕಿಯೊಬ್ಬಳು ಬಲಿಯಾಗಿದ್ದಳು. ಇದೀಗ 8 ವರ್ಷದ ಬಾಲಕ ನಯೆಗ್ಲೇರಿಯಾ ಪೊವ್ಲೇರಿ ಹೆಸರಿನ ಈ ಅಮೀಬಾದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಇದೊಂದು ಅತೀ ಚಿಕ್ಕ ಅಮೀಬಾ, ಮೈಕ್ರೋಸ್ಕೋಪ್ ನಲ್ಲಿ ಕಾಣಬಹುದಾಗಿದ್ದ ಈ ಏಕಕೋಶ ಜೀವಾಣು ಕೆರೆ, ನದಿ ಅಥವಾ ಈಜು ಕೊಳದಲ್ಲಿನ ನೀರಿನ ಮೂಲಕ ದೇಹವನ್ನು ಪ್ರವೇಶಿಸಿ ಮೆದುಳನ್ನು ತಿನ್ನುತ್ತದೆ ಎಂದು ವರದಿ ತಿಳಿಸಿದೆ.
Related Articles
Advertisement
ಈ ಸೂಕ್ಷ್ಮಾಣು ಅಮೀಬಾ ಮೂಗಿನ ಹೊಳ್ಳೆ ಮೂಲಕ ದೇಹವನ್ನು ಸೇರಿ, ಮೂಗಿನ ಸೂಕ್ಷ್ಮ ದ್ವಾರದ ಮೂಲಕ ಮೆದುಳನ್ನು ಪ್ರವೇಶಿಸುತ್ತದೆ. ಇದರ ಪರಿಣಾಮ ವಿಪರೀತ ತಲೆನೋವು, ವಿಪರೀತ ಜ್ವರ, ಕುತ್ತಿಗೆ ನೋವು, ವಾಂತಿ ಶುರುವಾದ ನಂತರ ತಲೆಸುತ್ತು ಬಂದು ಭ್ರಾಂತಿಗೊಳಗಾಗುತ್ತಾರೆ ಎಂದು ವರದಿ ತಿಳಿಸಿದೆ.
ಇದು ಒಬ್ಬ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೆ ಹರಡುವ ರೋಗ ಅಲ್ಲ. ಪರೀಕ್ಷೆಯಲ್ಲಿ ತಿಳಿದು ಬಂದ ಅಂಶದ ಪ್ರಕಾರ, ಬಾಲಕನ ಮನೆಯ ಗಾರ್ಡನ್ ನಲ್ಲಿರುವ ಕೊಳವೆ ನೀರಿನಲ್ಲಿ ಅಮೀಬಾ ಇದ್ದಿರುವುದು ಪತ್ತೆಯಾಗಿತ್ತು ಎಂದು ಲೇಕ್ ಜಾಕ್ಸನ್ ನಗರದ ವಕ್ತಾರ ತಿಳಿಸಿರುವುದಾಗಿ ವರದಿ ಹೇಳಿದೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ