Advertisement
4ನೇ ದಿನದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ 8 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತ್ತು. ರಚಿನ್ ರವೀಂದ್ರ 91 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡ ಕಾರಣ ಫಲಿತಾಂಶ ತೀವ್ರ ಕುತೂಹಲ ಮೂಡಿಸಿತ್ತು. ಆದರೆ ರಚಿನ್ ಸೋಮವಾರದ ಆಟದಲ್ಲಿ ತನ್ನ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಔಟಾಗುವುದರೊಂದಿಗೆ ಕುತೂಹಲವೆಲ್ಲ ತಣಿಯಿತು (168 ಎಸೆತ, 92 ರನ್, 9 ಬೌಂಡರಿ, 1 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-305 ಮತ್ತು 309. ನ್ಯೂಜಿಲ್ಯಾಂಡ್-340 ಮತ್ತು 211 (ರಚಿನ್ 92, ವಿಲಿಯಮ್ಸನ್ 30, ಬ್ಲಿಂಡೆಲ್ 30, ಲ್ಯಾಥಂ 28, ಪ್ರಭಾತ್ ಜಯಸೂರ್ಯ 68ಕ್ಕೆ 5, ರಮೇಶ್ ಮೆಂಡಿಸ್ 83ಕ್ಕೆ 3).
Related Articles
ದುಬಾೖ: ನಿರೀಕ್ಷೆಯಂತೆ ಶ್ರೀಲಂಕಾ- ನ್ಯೂಜಿಲ್ಯಾಂಡ್ ನಡುವಿನ ಗಾಲೆ ಟೆಸ್ಟ್ ಪಂದ್ಯದ ಫಲಿತಾಂಶದ ಬಳಿಕ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬದಲಾವಣೆ ಸಂಭವಿಸಿದೆ. ಈ ಪಂದ್ಯವನ್ನು ಜಯಿಸಿದ ಶ್ರೀಲಂಕಾ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿದೆ.
Advertisement
2023-25ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯ 8 ಟೆಸ್ಟ್‌ಗಳಲ್ಲಿ ಶ್ರೀಲಂಕಾ ಸಾಧಿಸಿದ 4ನೇ ಜಯ ಇದಾಗಿದೆ. ಅದೀಗ 48 ಅಂಕಗಳೊಂದಿಗೆ 50.00 ಗೆಲುವಿನ ಪ್ರತಿಶತ ದಾಖಲೆ (ಪಿಸಿಟಿ) ಹೊಂದಿದೆ. ಇನ್ನೊಂದೆಡೆ 3ನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್ 4ಕ್ಕೆ ಕುಸಿದಿದೆ (42.86). ಅದು 7 ಟೆಸ್ಟ್ ಗಳಲ್ಲಿ 3ನೇ ಸೋಲನುಭವಿಸಿತು. ಭಾರತ ಅಗ್ರಸ್ಥಾನ ಉಳಿಸಿಕೊಂಡಿದ್ದು (71.67), ಆಸ್ಟ್ರೇಲಿಯ 2ನೇ (62.50) ಸ್ಥಾನಿಯಾಗಿದೆ.
ಶ್ರೀಲಂಕಾಕ್ಕೆ ಫೈನಲ್ ಪ್ರವೇಶ ಸಾಧ್ಯವೇ ಎಂಬುದು ಮುಂದಿನ ಕುತೂಹಲ. ಅದು ನ್ಯೂಜಿಲ್ಯಾಂಡ್ ವಿರುದ್ಧ 2-0, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ಎದುರಿನ ತವರಿನ ಸರಣಿಯ ಎಲ್ಲ ಪಂದ್ಯಗಳನ್ನು ಗೆದ್ದರೆ ಇದು ಸಾಧ್ಯವಾಗಲಿದೆ. ಆಗ 69.23 ಪ್ರತಿಶತ ಗೆಲುವಿನ ಸಾಧನೆಯೊಂದಿಗೆ ಶ್ರೀಲಂಕಾ ಫೈನಲ್ ತಲುಪಲಿದೆ ಎಂಬುದೊಂದು ಲೆಕ್ಕಾಚಾರ.