Advertisement

ಟೆಸ್ಟ್ ಸರಣಿ: ಕಠಿಣ ಅಭ್ಯಾಸದಲ್ಲಿ ಪಾಲ್ಗೊಂಡ ಟೀಂ ಇಂಡಿಯಾ; ತಂಡ ಸೇರಿದ ಪಂತ್

05:11 PM Dec 12, 2022 | Team Udayavani |

ಚತ್ತೋಗ್ರಾಮ್‌: ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲು ಚತ್ತೋಗ್ರಾಮ್‌ ನಲ್ಲಿ ಭಾರತವು ತನ್ನ ಮೊದಲ ಅಭ್ಯಾಸ ನಡೆಸಿದೆ.  ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತರಬೇತಿ ಅವಧಿಯ ಮೇಲ್ವಿಚಾರಣೆ ಮಾಡಿದರು.

Advertisement

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಏಕದಿನ ಸರಣಿಯ ವೇಳೆ ರೋಹಿತ್ ಶರ್ಮಾ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಶರ್ಮಾ ಲಭ್ಯರಿರುವುದಿಲ್ಲ.

ಕೆಎಲ್ ರಾಹುಲ್ ಸೋಮವಾರ ಬೆಳಿಗ್ಗೆ ಶುಭ್ಮನ್ ಗಿಲ್ ಅವರೊಂದಿಗೆ ನೆಟ್ ಬೌಲರ್‌ ಗಳನ್ನು ಎದುರಿಸಿದರು. ರೋಹಿತ್ ಇಲ್ಲದ ಕಾರಣ ಕೆಎಲ್ ರಾಹುಲ್ ಮತ್ತು ಶುಬ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ರೋಹಿತ್ ಬದಲಿಗೆ ಇಂಡಿಯಾ ಎ ನಾಯಕ ಅಭಿಮನ್ಯು ಈಶ್ವರನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ:ಅಸ್ಸಾಂ : ಶಸ್ತ್ರಾಸ್ತ್ರಗಳ ಸಮೇತ ಶರಣಾಗತರಾದ ಸಾವಿರಕ್ಕೂ ಹೆಚ್ಚು ಬ್ರೂ ಉಗ್ರಗಾಮಿಗಳು

ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಇಂದು ಉತ್ತಮ ನೆಟ್ ಸೆಶನ್ ಹೊಂದಿದ್ದರು. ಬಾಂಗ್ಲಾಕ್ಕೆ ಏಕದಿನ ತಂಡದೊಂದಿಗೆ ಬಂದಿದ್ದ ಪಂತ್ ಫಿಟ್ನೆಸ್ ಸಮಸ್ಯೆ ಕಾರಣದಿಂದ ತಂಡದಿಂದ ಬೇರ್ಪಟ್ಟಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದು, ಚಿಕಿತ್ಸೆ ಪಡೆದು ಇದೀಗ ಮತ್ತೆ ಟೆಸ್ಟ್ ತಂಡ ಕೂಡಿಕೊಂಡಿದ್ದಾರೆ.

Advertisement

ಎರಡನೇ ಆಯ್ಕೆಯ ವಿಕೆಟ್ ಕೀಪರ್ ಕೆಎಸ್ ಭರತ್ ಕೂಡಾ ಅಭ್ಯಾಸದಲ್ಲಿ ತೊಡಗಿದ್ದರು. ಉಪನಾಯಕ ಚೇತೇಶ್ವರ ಪೂಜಾರ ಕೂಡ ತರಬೇತಿ ಅವಧಿಯಲ್ಲಿ ಕಂಡುಬಂದರು. ಎರಡನೇ ಅನಧಿಕೃತ ಟೆಸ್ಟ್‌ಗಾಗಿ ಭಾರತ ಎ ತಂಡದೊಂದಿಗೆ ಬಾಂಗ್ಲಾದೇಶದಲ್ಲಿದ್ದ ಹಿರಿಯ ಬ್ಯಾಟರ್ ಪೂಜಾರ ತರಬೇತಿ ಅವಧಿಯಲ್ಲಿ ಮುಖ್ಯ ಕೋಚ್ ದ್ರಾವಿಡ್ ಅವರೊಂದಿಗೆ ಸಮಾಲೋಚನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next