Advertisement
ಸರ್ಫರಾಜ್ ಖಾನ್ ಅವರ ಯಶಸ್ಸಿನ ಗುಟ್ಟು ಸ್ಪಿನ್ ಎಸೆತಗಳನ್ನು ಬಹಳ ಜಾಣ್ಮೆಯಿಂದ ನಿಭಾಯಿಸುವುದು. ಕಳೆದ 15 ವರ್ಷಗಳಿಂದ ಇವರು ತಂದೆಯ ಮೇಲುಸ್ತುವಾರಿಯಲ್ಲಿ ನಡೆಸಿದ ಬಿಡುವಿಲ್ಲದ ಅಭ್ಯಾಸ ಯುವ ಕ್ರಿಕೆಟಿಗರಿಗೊಂದು ಮಾದರಿ. ತಂದೆ ನೌಶಾದ್ ಖಾನ್ ಅವರ “ಮಾಚೋ ಕ್ರಿಕೆಟ್ ಕ್ಲಬ್’ ಸರ್ಫರಾಜ್ ಖಾನ್ ಅವರ ಅಭ್ಯಾಸದ ಮೊದಲ ಮೆಟ್ಟಿಲು.
ದಿನಂಪ್ರತಿ 500 ಸ್ಪಿನ್ ಎಸೆತಗಳನ್ನು ವಿವಿಧ ಟ್ರ್ಯಾಕ್‌ಗಳಲ್ಲಿ ಅಭ್ಯಾಸ ನಡೆಸುತ್ತ ಬಂದದ್ದು ಸಫìರಾಜ್ ಅವರ ಹಠ ಹಾಗೂ ಬದ್ಧತೆಗೆ ಸಾಕ್ಷಿ. ಆಫ್ಸ್ಪಿನ್, ಲೆಗ್‌ಸ್ಪಿನ್, ಎಡಗೈ ಸ್ಪಿನ್ನರ್‌ಗಳ ಎಸೆತಗಳನ್ನು ಅತ್ಯಂತ ಶ್ರದ್ಧೆಯಿಂದ ಎದುರಿಸಿದ ಫಲವಾಗಿಯೇ ಇಂದು ಹಾರ್ಟ್ಲಿ, ರೂಟ್, ರೆಹಾನ್ ಅಹ್ಮದ್ ಅವರ ದಾಳಿಯನ್ನು ಸಫìರಾಜ್‌ಗೆ ದಿಟ್ಟ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಯಿತು. ನೆರವಾಯಿತು ಲಾಕ್‌ಡೌನ್
ಎರಡು ಲಾಕ್‌ಡೌನ್ ಅವಧಿಗಳಲ್ಲಿ 1,600 ಕಿ.ಮೀ.ಗಳಷ್ಟು ದೂರವನ್ನು ಕಾರಿನಲ್ಲಿ ಸಂಚರಿಸುತ್ತ, “ಸ್ಪಿನ್ ಅಖಾಡ’ಗಳಿದ್ದಲ್ಲೆಲ್ಲ ಬ್ಯಾಟಿಂಗ್ ಅಭ್ಯಾಸ ನಡೆಸಿದ ಸಾಹಸಿ ಈ ಸರ್ಫರಾಜ್ ಖಾನ್. ಮುಂಬಯಿಂದ ಮೊದಲ್ಗೊಂಡ ಇವರ ಪಯಣ ಅನ್ರೋಹ, ಮೊರಾದಾಬಾದ್, ಮೀರತ್, ಕಾನ್ಪುರ, ಮಥುರಾ, ಡೆಹ್ರಾಡೂನ್ ತನಕ ಸಾಗಿತ್ತು. ಕಾನ್ಪುರ ಅಕಾಡೆಮಿಯಲ್ಲಿ ಕುಲದೀಪ್ ಯಾದವ್ ಎಸೆತಗಳನ್ನು ಎದುರಿಸಲು ಅಭ್ಯಾಸ ಮಾಡಿಕೊಂಡರು.
Related Articles
ಸಾಮಾನ್ಯವಾಗಿ ಕ್ರಿಕೆಟಿಗರು ಒಬ್ಬರು ತಪ್ಪಿದರೆ ಇಬ್ಬರು ಕೋಚ್‌ಗಳ ಗರಡಿಯಲ್ಲಿ ಪಳಗುತ್ತಾರೆ. ಆದರೆ ಸಫìರಾಜ್ ಹಾಗಲ್ಲ, ಇವರು ದೇಶದ ಬಹುತೇಕ ಜನಪ್ರಿಯ ತರಬೇತುತಾರರಿಂದ ಮಾರ್ಗದರ್ಶನ ಪಡೆದಿರುವುದು ವಿಶೇಷ. ಕಪಿಲ್ ಪಾಂಡೆ, ಸಂಜಯ್ ರಸ್ತೋಗಿ, ಬದ್ರುದ್ದೀನ್ ಶೇಖ್, ಸಂಜಯ್ ಭಾರದ್ವಾಜ್, ಆರ್.ಪಿ. ಈಶ್ವರನ್ ಇವರಲ್ಲಿ ಪ್ರಮುಖರು.
Advertisement