ಲಾಹೋರ್: ಆಸ್ಟ್ರೇಲಿಯ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ಎಚ್ಚರಿಕೆಯ ಆರಂಭ ಮಾಡಿದೆ. ಪ್ರವಾಸಿಗರ 391ಕ್ಕೆ ಉತ್ತರವಾಗಿ 2ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 90 ರನ್ ಗಳಿಸಿದೆ.
ದ್ವಿತೀಯ ದಿನದಾಟದಲ್ಲಿ ಕ್ಯಾಮರಾನ್ ಗ್ರೀನ್ (79) ಮತ್ತು ಅಲೆಕ್ಸ್ ಕ್ಯಾರಿ (67) ಸೇರಿಕೊಂಡು ಆಸ್ಟ್ರೇಲಿಯದ ಸರದಿಯನ್ನು ಬೆಳೆಸಿದರು. 6ನೇ ವಿಕೆಟಿಗೆ 135 ರನ್ ಒಟ್ಟುಗೂಡಿತು.
ಪಾಕಿಸ್ಥಾನದ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ. ಇಬ್ಬರೂ ತಲಾ 4 ವಿಕೆಟ್ ಉರುಳಿಸಿದರು.
ಇದನ್ನೂ ಓದಿ:ಬಾಂಗ್ಲಾ ವೇಗಿ ಟಸ್ಕಿನ್ ಅಹ್ಮದ್ ಗೆ ನಿರಾಕ್ಷೇಪಣಾಪತ್ರ ನೀಡಲು ಬಿಸಿಬಿ ನಕಾರ
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-391 (ಖ್ವಾಜಾ 91, ಗ್ರೀನ್ 79, ಕ್ಯಾರಿ 67, ಸ್ಮಿತ್ 59, ನಸೀಮ್ ಶಾ 58ಕ್ಕೆ 4, ಅಫ್ರಿದಿ 79ಕ್ಕೆ 4). ಪಾಕಿಸ್ಥಾನ-ಒಂದು ವಿಕೆಟಿಗೆ 90 (ಶಫೀಕ್ ಬ್ಯಾಟಿಂಗ್ 45, ಅಜರ್ ಅಲಿ ಬ್ಯಾಟಿಂಗ್ 30).