Advertisement
ಕೇವಲ 26 ರನ್ನುಗಳ ಗುರಿ ಪಡೆದ ಆಸ್ಟ್ರೇಲಿಯ ಇದನ್ನು ವಿಕೆಟ್ ನಷ್ಟವಿಲ್ಲದೆ ಸಾಧಿಸಿತು. ದ್ವಿತೀಯ ಟೆಸ್ಟ್ ಜ. 25ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.
ಇನ್ನಿಂಗ್ಸ್ ಸೋಲಿನಿಂದ ಪಾರಾದುದಷ್ಟೇ ವೆಸ್ಟ್ ಇಂಡೀಸ್ ಸಾಧನೆ. ಮೊದಲ ಸರದಿಯಲ್ಲಿ ಅರ್ಧ ಶತಕ ಹೊಡೆದಿದ್ದ ಕರ್ಕ್ ಮೆಕೆಂಝಿ 26 ರನ್ ಮಾಡಿ ಟಾಪ್ ಸ್ಕೋರರ್ ಎನಿಸಿದರು. ಮಿಚೆಲ್ ಸ್ಟಾರ್ಕ್ ಮತ್ತು ನಥನ್ ಲಿಯಾನ್ ತಲಾ 2 ವಿಕೆಟ್ ಕೆಡವಿದರು. ಪಂದ್ಯ ಮೂರೇ ದಿನಗಳಲ್ಲಿ ಮುಗಿಯಿತು. ಮೊದÇ ಇನ್ನಿಂಗ್ಸ್‌ನಲ್ಲಿ 119 ರನ್ ಬಾರಿಸಿದ್ದ ಟ್ರ್ಯಾವಿಸ್ ಹೆಡ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್-188 ಮತ್ತು 120 (ಮೆಕೆಂಝಿ 26, ಗ್ರೀವ್ಸ್ 24, ಜೋಶುವ 18, ಜೋಸೆಫ್ 16, ಹೇಝಲ್‌ವುಡ್ 35ಕ್ಕೆ 5, ಲಿಯಾನ್ 4ಕ್ಕೆ 2, ಸ್ಟಾರ್ಕ್ 46ಕ್ಕೆ 2). ಆಸ್ಟ್ರೇಲಿಯ-283 ಮತ್ತು ವಿಕೆಟ್ ನಷ್ಟವಿಲ್ಲದೆ 26 (ಸ್ಮಿತ್ ಔಟಾಗದೆ 11, ಖ್ವಾಜಾ ಔಟಾಗದೆ 9).
ಪಂದ್ಯಶ್ರೇಷ್ಠ: ಟ್ರ್ಯಾವಿಸ್ ಹೆಡ್.