Advertisement

ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ : ಮ್ಯಾಥ್ಯೂಸ್‌, ಚಂಡಿಮಾಲ್‌ ಶತಕ

12:18 AM Feb 04, 2024 | Team Udayavani |

ಕೊಲಂಬೊ: ಏಂಜೆಲೊ ಮ್ಯಾಥ್ಯೂಸ್‌ ಮತ್ತು ದಿನೇಶ್‌ ಚಂಡಿಮಾಲ್‌ ಅವರ ಶತಕ ಸಾಹಸದಿಂದ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಭಾರೀ ಮೇಲುಗೈ ಸಾಧಿಸಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 410 ರನ್‌ ಗಳಿಸಿದ್ದು, 212 ರನ್‌ ಮುನ್ನಡೆಯಲ್ಲಿದೆ. ಅಫ್ಘಾನ್‌ ಮೊದಲ ಸರದಿಯಲ್ಲಿ 198ಕ್ಕೆ ಆಲೌಟ್‌ ಆಗಿತ್ತು.

Advertisement

ಲಂಕಾ ತಂಡದ ಅತ್ಯಂತ ಹಿರಿಯ ಆಟಗಾರನಾಗಿರುವ ಏಂಜೆಲೊ ಮ್ಯಾಥ್ಯೂಸ್‌ 141 ರನ್‌ ಬಾರಿಸಿದರು. ಇದು ಅವರ 16ನೇ ಟೆಸ್ಟ್‌ ಶತಕ. 259 ಎಸೆತಗಳನ್ನು ನಿಭಾಯಿಸಿದ ಅವರು 14 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.

ದಿನೇಶ್‌ ಚಂಡಿಮಾಲ್‌ ಗಳಿಕೆ 107 ರನ್‌. 181 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಆರಂಭಕಾರ ದಿಮುತ್‌ ಕರುಣಾರತ್ನೆ 77, ನಿಶಾನ್‌ ಮದುಷ್ಕ 37 ರನ್‌ ಮಾಡಿದರು. ಆದರೆ ನಾಯಕ ಧನಂಜಯ ಡಿ ಸಿಲ್ವ ಖಾತೆ ತೆರೆಯುವ ಮೊದಲೇ ರನೌಟ್‌ ಆದರು.

Advertisement

Udayavani is now on Telegram. Click here to join our channel and stay updated with the latest news.

Next