Advertisement

Test; ಲಂಕಾ ವಿರುದ್ಧ ಸೋಲು ತಪ್ಪಿಸಲು ಅಫ್ಘಾನ್‌ ಹೋರಾಟ

11:16 PM Feb 04, 2024 | Team Udayavani |

ಕೊಲಂಬೊ: ಶ್ರೀಲಂಕಾ ತಂಡದೆದುರಿನ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಸೋಲು ತಪ್ಪಿಸಲು ಅಫ್ಘಾನಿಸ್ಥಾನ ಹೋರಾಟ ನಡೆಸುತ್ತಿದೆ. ಪಂದ್ಯದ ಮೂರನೇ ದಿನ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್‌ ಅವರ ಅಜೇಯ ಶತಕದಿಂದಾಗಿ ಅಫ್ಘಾನಿಸ್ಥಾನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟಿಗೆ 199 ರನ ಗಳಿಸಿ ಆಡುತ್ತಿದೆ.

Advertisement

ಇನ್ನಿಂಗ್ಸ್‌ ಸೋಲು ತಪ್ಪಿಸಲು ತಂಡ ಇನ್ನೂ 42 ರನ್‌ ಗಳಿಸಬೇಕಾಗಿದೆ.ಮೊದಲು ಬ್ಯಾಟಿಂಗ್‌ ಮಾಡಿದ್ದ ಅಫ್ಘಾನಿಸ್ಥಾನ 198 ರನ್ನಿಗೆ ಆಲೌಟಾಗಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡವು 439 ರನ್‌ ಗಳಿಸಿ ಆಲೌಟಾಗಿತ್ತು. ಈ ಮೂಲಕ 241 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next