Advertisement

Test ; ಭಾರತಕ್ಕೆ 5 ರನ್‌ ಪೆನಾಲ್ಟಿ : ವಿಚಿತ್ರ ವಿದ್ಯಮಾನ

10:59 PM Feb 16, 2024 | Team Udayavani |

ರಾಜ್‌ಕೋಟ್‌: ಭಾರತದ ಇನ್ನಿಂಗ್ಸ್‌ ಮುಗಿಯುವ ಮೊದಲೇ ಇಂಗ್ಲೆಂಡ್‌ ಸ್ಕೋರ್‌ಬೋರ್ಡ್‌ “ನೋಲಾಸ್‌ 5 ರನ್‌’ ದಾಖಲಿಸಿದ್ದು ರಾಜ್‌ಕೋಟ್‌ ಟೆಸ್ಟ್‌ ಪಂದ್ಯದ 2ನೇ ದಿನದಾಟದ ವಿಚಿತ್ರ ವಿದ್ಯಮಾನವೆನಿಸಿತು. ಇದಕ್ಕೆ ಕಾರಣ, ರನ್‌ ಗಳಿಸುವ ವೇಳೆ ಆರ್‌. ಅಶ್ವಿ‌ನ್‌ ಪಿಚ್‌ ಮೇಲೆಯೇ ಓಡಿದ್ದು. ಹೀಗಾಗಿ ಅಂಪಾಯರ್‌ ಜೋಯೆಲ್‌ ವಿಲ್ಸನ್‌ ಭಾರತಕ್ಕೆ 5 ರನ್‌ ಪೆನಾಲ್ಟಿ ವಿಧಿಸಿದರು.

Advertisement

ಎಡಗೈ ಆರಂಭಕಾರ ಬೆನ್‌ ಡಕೆಟ್‌ ಮೂಲಕ ಮತ್ತೆ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಇಂಗ್ಲೆಂಡ್‌, ರಾಜ್‌ಕೋಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ದಿಟ್ಟ ಜವಾಬು ನೀಡಿದೆ. ಆತಿಥೇಯರ 445ಕ್ಕೆ ಉತ್ತರವಾಗಿ 2 ವಿಕೆಟಿಗೆ 207 ರನ್‌ ಪೇರಿಸಿದೆ. ಇದರಲ್ಲಿ ಡಕೆಟ್‌ ಗಳಿಕೆ ಅಜೇಯ 133 ರನ್‌.

Advertisement

Udayavani is now on Telegram. Click here to join our channel and stay updated with the latest news.

Next