ನಾಟಿಂಗ್‌ಹ್ಯಾಮ್: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 241 ರನ್ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ 241 ರನ್‌ಗಳ ಜಯ ಸಾಧಿಸಿತ್ತು. ಇದು 2000 ರಿಂದ ಇಂಗ್ಲೆಂಡ್ ನೆಲದಲ್ಲಿ ವೆಸ್ಟ್ ಇಂಡೀಸ್‌ಗೆ ಸತತ 8 ನೇ ಟೆಸ್ಟ್ ಸರಣಿ ಸೋಲಾಗಿದೆ. ತಂಡ 1988 ರಲ್ಲಿ ಇಂಗ್ಲೆಂಡ್‌ನಲ್ಲಿ ಸರಣಿಯನ್ನು ಗೆದ್ದರು.
ವೆಸ್ಟ್ ಇಂಡೀಸ್ ಗೆಲುವಿಗೆ 385 ರನ್ ನಿಗದಿಯಾಗಿತ್ತು. 91ಕ್ಕೆ 6 ವಿಕೆಟ್ ಕಳೆದುಕೊಂಡು 4ನೇ ದಿನದಾಟವನ್ನು ಮುಂದುವರಿಸಿದ ಕೆರಿಬಿಯನ್ ಪಡೆ ತೀವ್ರ ಸಂಕಟಕ್ಕೆ ಸಿಲುಕಿ 143 ರನ್ ಗಳಿಗೆ ಆಲೌಟಾಗುವ ಮೂಲಕ ಆಂಗ್ಲರಿಗೆ ಶರಣಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಗಳಿಸಿದ ಒಲಿ ಪೋಪ್ ಪಂದ್ಯ ಶ್ರೇಷ್ಠ ಎನಿಸಿಕೊಂಡರು.
41 ರನ್ ಹಿನ್ನಡೆಗೆ ಸಿಲುಕಿದ ಇಂಗ್ಲೆಂಡ್ ದ್ವಿತೀಯ ಸರದಿಯಲ್ಲಿ 425 ರನ್ ಪೇರಿಸಿತ್ತು.ಜೋ ರೂಟ್ 122 ಮತ್ತು ಹ್ಯಾರಿ ಬ್ರೂಕ್ 109 ರನ್ ಹೊಡೆದರು.
ವಿಂಡೀಸ್ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 61 ರನ್ ಮಾಡಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ 30 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು.
ಇಂಗ್ಲೆಂಡ್ 416 & 425 ವೆಸ್ಟ್ ಇಂಡೀಸ್ 457 & 143