ಸದ್ಯ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸುತ್ತದೆ. ಭಾರತ ದಲ್ಲಿ ವಿದ್ಯುತ್ ಚಾಲಿತ ಕಾರುಗಳ ಪ್ರಮಾಣವನ್ನು 2030ರ ಹೊತ್ತಿಗೆ ಶೇ.30 ಕ್ಕೇರಿಸಲು ಕೇಂದ್ರ ಸರಕಾರ ಹೊರಟಿದೆ. ಇದೇ ವೇಳೆ ಚೀನ ಮತ್ತು ಅಮೆರಿಕದಲ್ಲಿ ಟೆಸ್ಲಾ ವಾಹನಗಳ ಮಾರಾಟ ಕುಸಿದಿದೆ. ಇಂತಹ ಹೊತ್ತಿನಲ್ಲಿ ಮಸ್ಕ್ ಭಾರತ ಭೇಟಿ ಮಹತ್ವ ಪಡೆದಿದೆ.
Advertisement
ಮಸ್ಕ್ ಟ್ವೀಟ್‌ಬಗ್ಗೆ ಅಮೆರಿಕದಲ್ಲಿ ಚರ್ಚೆವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡ ದಿರುವುದು ಅಚ್ಚರಿ ಹುಟ್ಟಿಸಿದೆ. ವಿಶ್ವಸಂಸ್ಥೆಯನ್ನೇ ಪುನಾರಚನೆ ಮಾಡಬೇಕಾದ ಆವಶ್ಯಕತೆಯಿದೆ ಎಂದು 3 ತಿಂಗಳ ಹಿಂದೆ ಮಸ್ಕ್ ಮಾಡಿದ ಆಗ್ರಹದ ಬಗ್ಗೆ ಅಮೆರಿಕ ದಲ್ಲೀಗ ಚರ್ಚೆ ಶುರುವಾಗಿದೆ.