ಮುಂಬೈ: ವಿಶ್ವದ ಬೃಹತ್ ವಿದ್ಯುತ್ ಚಾಲಿತ ವಾಹನ ನಿರ್ಮಾಣ ಕಂಪನಿಗಳಲ್ಲೊಂದಾದ ಅಮೆರಿಕದ ಟೆಸ್ಲಾ, ಈ ವರ್ಷ ಭಾರತದಲ್ಲಿ ತನ್ನ ಮೊದಲ ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆ ಮಾಡುವುದು ಖಚಿತವಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಉತ್ಪಾದನೆ ಘಟಕ ಆರಂಭಿಸಿರುವ ಅದು, ಮುಂಬೈನಲ್ಲಿ ವಾಣಿಜ್ಯ ಸಂಬಂಧಿ ಕೇಂದ್ರಕಚೇರಿ ತೆರೆಯಲು ಸಿದ್ಧವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
40,000 ಚದರಡಿ ವಿಸ್ತೀರ್ಣದಲ್ಲಿ ಮುಂಬೈನ ಲೋವರ್ ಪಾರೆಲ್- ವರ್ಲಿ ಪ್ರದೇಶದಲ್ಲಿ ಈ ಕಚೇರಿ ನಿರ್ಮಾಣಗೊಳ್ಳಲಿದೆ.
ಇದನ್ನೂ ಓದಿ :ಅರಬ್ಬೀ ಸಮುದ್ರದಲ್ಲಿ “ಮರ್ಸಿಡಿಸ್’ ಹಡಗಿನ ಅವಶೇಷ : ನೌಕಾಪಡೆಯಿಂದ ತೀವ್ರ ತಪಾಸಣೆ
ಅಲ್ಲದೇ ತನ್ನ ಉನ್ನತ ಹುದ್ದೆಗಳಿಗಾಗಿ ಬೆಂಗಳೂರಿನ ಐಐಎಂನಿಂದ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಭಾರತದ ನೀತಿನಿರೂಪಣೆ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥರನ್ನಾಗಿ ಮನೋಜ್ ಖುರಾನರನ್ನು ನೇಮಿಸಿದೆ.