Advertisement

ಜೈವಿಕ ಭಯೋತ್ಪಾದನೆಗೆ ಕೋವಿಡ್ ಕುಮ್ಮಕ್ಕು: ವಿಶ್ವಸಂಸ್ಥೆ ಕಳವಳ

03:14 AM Apr 11, 2020 | Hari Prasad |

ವಿಶ್ವಸಂಸ್ಥೆ: ಕೋವಿಡ್ ವೈರಸ್‌ನಿಂದಾಗಿ ಜಗತ್ತಿಗೆ ಜೈವಿಕ ಭಯೋತ್ಪಾದನೆಯ ಮೂಲಕ ದಾಳಿ ನಡೆದರೆ ಯಾವ ರೀತಿಯ ಅನಾಹುತ ಸಂಭವಿಸಬಹುದು ಎಂಬ ಕಲ್ಪನೆ ಜಗತ್ತಿಗೆ ಸಿಕ್ಕಿದಂತಾಗಿದೆ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್‌ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಸದ್ಯದ ಸಮಸ್ಯೆ ಸಂದರ್ಭದಲ್ಲಿಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇದೇ ಮೊದಲ ಬಾರಿಗೆ ಗುರುವಾರ ಸಭೆ ನಡೆಸಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಸ್ತಾವಿಕವಾಗಿ ಮಾತನಾಡಿದ ವೇಳೆ ಗುಟೆರೆಸ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಅಂಶ ಬೀಭತ್ಸ ಕೃತ್ಯಗಳನ್ನು ನಡೆಸಲು ಒಂದು ಅವಕಾಶ ಮಾಡಿಕೊಟ್ಟಂತಾಗಿದೆ ಎಂದಿದ್ದಾರೆ.

ಸೋಂಕಿನ ದುಷ್ಪರಿಣಾಮವನ್ನು ಎದುರಿಸಲು ವಿಫ‌ಲರಾಗಿದ್ದು ಇಂಥ ಜೈವಿಕ ಭಯೋತ್ಪಾದನಾ ಕೃತ್ಯಗಳನ್ನು ನಡೆಸುವವರಿಗೆ ಆಹ್ವಾನವಿತ್ತಂತೆ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಾಲಿ ಸ್ಥಿತಿಯನ್ನು ಕೆಲ ಪ್ರತ್ಯೇಕತಾವಾದಿಗಳು ದುರುಪಯೋಗಪಡಿಸಿಕೊಂಡು ಹಿಂಸಾತ್ಮಕ ಕೃತ್ಯಗಳಿಗೆ ಪ್ರಚೋದನೆ ನೀಡುವ ಸಾಧ್ಯತೆಗಳಿವೆ. ಅದರ ಬಗ್ಗೆ ಸದಸ್ಯ ರಾಷ್ಟ್ರಗಳು ಎಚ್ಚರದಿಂದ ಇರಬೇಕು ಎಂದು ಸಲಹೆ ಮಾಡಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟ ತಲೆಮಾರಿನ ಹೋರಾಟವಾಗಲಿದೆ. ಸೋಂಕು ಪ್ರಭಾವ ತಗ್ಗಿದ ಅನಂತರ ಉಂಟಾಗಲಿರುವ ಪ್ರಭಾವಗಳು ಘೋರ’ ಎಂದಿದ್ದಾರೆ. ಆದರೆ ಸದ್ಯದ ಸ್ಥಿತಿ ಬಗ್ಗೆ ಯಾವುದೇ ರೀತಿಯ ನಿರ್ಣಯಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next