Advertisement

ಉಗ್ರರ ಕಣ್ಣು ಬೆಂಗಳೂರಿನ ಮೇಲಿದೆ!

12:41 AM Feb 13, 2020 | Team Udayavani |

ಬೆಂಗಳೂರು: ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮೇಲೂ ಉಗ್ರರ ಕಣ್ಣಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಅಮೆರಿಕ ಸೇರಿ ಹಲವು ರಾಷ್ಟ್ರಗಳು ಉಗ್ರ ಚಟುವಟಿಕೆಗಳ ಕಡಿವಾಣಕ್ಕೆ ಬಿಗಿ ಕ್ರಮ ಕೈಗೊಂಡಿವೆ. ಬಾಂಗ್ಲಾದೇಶದಲ್ಲಿ ವಿಶ್ವದ 10 ಅಪಾಯಕಾರಿ ಉಗ್ರ ಸಂಘಟನೆಗಳು ನೆಲೆ ಕಂಡು ಕೊಂಡಿವೆ. ಹೀಗಾಗಿ ಸಹಜವಾಗಿಯೇ ಅವುಗಳ ಪ್ರಭಾವ ಭಾರತ ಹಾಗೂ ಬೆಂಗಳೂರಿನ ಮೇಲಿರಲಿದೆ ಎಂದರು.

ತಂತ್ರಜ್ಞಾನ, ಆರ್ಥಿಕತೆ, ಜನಸಂಖ್ಯೆ ಹೆಚ್ಚಳ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಮುಂದಿರುವ ಬೆಂಗಳೂರಲ್ಲಿ ಉಗ್ರರು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಲು ಉತ್ತೇಜನಕಾರಿ ವಾತಾವರಣವಿದೆ. ಹೀಗಾಗಿಯೇ ಉಗ್ರರ ಕಣ್ಣು ನಗರದ ಮೇಲಿದ್ದು, ಸ್ಲಿàಪರ್‌ ಸೆಲ್‌ ಮಾಡಿಕೊಳ್ಳಲು ಹವಣಿಸುತ್ತಾರೆ.

ಆದರೆ, ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ಇಲಾಖೆ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಗರುಡ ಪಡೆ ಕೂಡ ಅಸ್ತಿತ್ವದಲ್ಲಿದೆ. ಅವರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡದಂತೆ ಸಾರ್ವಜನಿಕರೂ ಇಲಾಖೆಗೆ ನೆರವಾಗಬೇಕು ಎಂದು ಹೇಳಿದರು.

ಅಕ್ರಮ ವಲಸಿಗರೂ ಇದ್ದಾರೆ: ವಿಫ‌ುಲ ಉದ್ಯೋಗ ಅವಕಾಶಗಳು ಸೇರಿ ವಿವಿಧ ಕಾರಣಗಳಿಗೆ ವಿವಿಧ ದೇಶಗಳಿಂದ ವಲಸಿಗರು ಬಂದು ಬೆಂಗಳೂರಿನಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ನೇಪಾಳ ಹಾಗೂ ಬಾಂಗ್ಲಾದೇಶಿಗರಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು.

Advertisement

ಮೂರು ನಿಮಿಷದಲ್ಲಿ ಹೊಯ್ಸಳ: ನಾಗರಿಕರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲು ಸದ್ಯ ಹೊಯ್ಸಳ ಜಾರಿಯಲ್ಲಿದ್ದು, ಕರೆ ಮಾಡಿದ ಏಳು ನಿಮಿಷಗಳಿಗೆ ಸ್ಥಳಕ್ಕೆ ತಲುಪಲಾಗುತ್ತಿದೆ. ಈ ಸೇವೆಯನ್ನು ಮತ್ತಷ್ಟು ತ್ವರಿತಗೊಳಿಸಲು ಈಗಿರುವ ಹೊಯ್ಸಳ ವಾಹನಗಳ ಸಂಖ್ಯೆ ದುಪ್ಪಾಟ್ಟಾಗಬೇಕು.

ಹೀಗಾಗಿ ಅಗತ್ಯ ಹೊಯ್ಸಳ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಜೆಟ್‌ನಲ್ಲಿ ಅನುದಾನ ಸಿಗುವ ಸಾಧ್ಯತೆಯಿದೆ. ಅನುದಾನ ಸಿಕ್ಕಿ ವಾಹನಗಳು ಲಭ್ಯವಾದರೇ ಕರೆ ಮಾಡಿದ ಮೂರು ನಿಮಿಷಗಳಲ್ಲಿಯೇ ಹೊಯ್ಸಳ ಸಿಬ್ಬಂದಿ ಹಾಜರಾಗಲಿದ್ದಾರೆ ಎಂದರು.

ಸಿಸಿ ಕ್ಯಾಮೆರಾ ಕಡ್ಡಾಯ: ಅಪರಾಧ ಕೃತ್ಯಗಳನ್ನು ತಡೆಯಲು ಹಾಗೂ ಅರೋಪಿಗಳನ್ನು ಬೇಗನೆ ಪತ್ತೆಹಚ್ಚಲು ಸಿಸಿ ಕ್ಯಾಮೆರಾ ನೆರವಾಗಲಿವೆ. ಹೀಗಾಗಿ, ವ್ಯಾಪಾರಿಗಳು ತಮ್ಮ ಅಂಗಡಿ ಮುಂದೆ ಕಡ್ಡಾಯವಾಗಿ ಕ್ಯಾಮೆರಾ ಅಳವಡಿಸಬೇಕು. ವಾಹನ ಕಳವು ಕೂಡ ನಗರದಲ್ಲಿ ಹೆಚ್ಚಾಗಿದೆ ಪೊಲೀಸರ ಹೊರತಾಗಿ ವಾಹನಸವಾರರು ಕೂಡ ಜಿಪಿಎಸ್‌ ಚಿಪ್‌ ಅಳವಡಿಸುವ ಮೂಲಕ ಸ್ವಯಂ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಹೊರರಾಜ್ಯದ ಕೆಲಸದವರು ಬೇಕು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ನುರಿತ ಹಾಗೂ ಉತ್ತಮ ಕೆಲಸಗಾರರ ಅಗತ್ಯವಿದೆ. ಹೀಗಾಗಿ ರಾಜ್ಯ ಹಾಗೂ ಹೊರರಾಜ್ಯದ ಕೆಲಸಗಾರರ ಅಗತ್ಯವಿದೆ ಎಂದು ಆಯುಕ್ತ ಭಾಸ್ಕರ್‌ ರಾವ್‌ ಹೇಳಿದರು.

20 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯಲ್ಲಿ ಈಗ ನಗರದಲ್ಲಿಲ್ಲ. ಪ್ರಪಂಚದ ಎಲ್ಲ ದೇಶಗಳ, ದೇಶದ ಎಲ್ಲ ರಾಜ್ಯಗಳ ಜನರು ಇಲ್ಲಿ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿರುವ ಉದ್ಯೋಗಗಳಿಗೆ ನುರಿತ ಕೆಲಸಗಾರರ ಅಗತ್ಯವೂ ಇದೆ. ಈ ಕಾರಣಕ್ಕೆ ಹೊರಗಿನ ಕೆಲಸದವರೂ ಕೂಡ ಬೇಕಾಗುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next