Advertisement

ಕಲ್ಲೇಟಿಗೆ ಉಗ್ರರು ಪರಾರಿ!

07:30 AM Dec 06, 2017 | Harsha Rao |

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ಸರ್ವೇ ಸಾಮಾನ್ಯ. ಆದರೆ ಈ ಬಾರಿ ನಡೆದ ಘಟನೆ ಮಾತ್ರ ಜನರಿಗಷ್ಟೇ ಅಲ್ಲ, ಪೊಲೀಸರನ್ನೂ ದಿಗ್ಭ್ರಮೆಗೊಳಿಸಿದೆ!

Advertisement

ಹೌದು, ಕಲ್ಲು ತೂರಾಟ ಘಟನೆ ನಡೆದ ಕಾಶ್ಮೀರ ಕಣಿವೆಯ ನೂಪುರ ಪ್ರದೇಶಕ್ಕೆ ಆಗಮಿಸಿದ ಪೊಲೀಸರಿಗೂ ಅಚ್ಚರಿಯೊಂದು ಕಾದಿತ್ತು. ಜಮ್ಮು ಕಾಶ್ಮೀರ ಬ್ಯಾಂಕ್‌ನ ಸ್ಥಳೀಯ ಶಾಖೆ ಕಟ್ಟಡದಲ್ಲಿ ಸೇರಿಕೊಂಡ ಭಯೋತ್ಪಾದಕರು ದರೋಡೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯರು ಸಮಯೋಚಿತವಾಗಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಸೋಮವಾರ ಬ್ಯಾಂಕ್‌ ಬಾಗಿಲು ತೆರೆಯುವುದಕ್ಕೂ ಮುನ್ನವೇ ಒಳ ಪ್ರವೇ ಶಿಸಿದ್ದ ಇಬ್ಬರು ಉಗ್ರರನ್ನು ಸ್ಥಳೀಯ ರೊಬ್ಬರು ಗಮನಿಸಿದ್ದಾರೆ. ತಕ್ಷಣ ನೆರೆಮಂದಿ ಗೆಲ್ಲ ಮಾಹಿತಿ ನೀಡಿ ಒಂದೆಡೆ ಸೇರಿ ಕಲ್ಲುತೂರಲಾರಂಭಿಸಿದ್ದಾರೆ. ಇದರಿಂದ ಸಿಟ್ಟಾದ ಉಗ್ರರು ಜನರತ್ತ ಗುಂಡಿನ ದಾಳಿ ನಡೆಸಿ ದರಾದರೂ ಕಲ್ಲೇಟಿನಿಂದ ತಪ್ಪಿಸಿ ಕೊಳ್ಳಲು ಸಾಧ್ಯವಾಗದೇ ಅಲ್ಲಿಂದ ಪರಾರಿ ಯಾ ಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರು ಭಾರಿ ಪ್ರಮಾಣದಲ್ಲೇ ದರೋ ಡೆಗೆ ಮುಂದಾಗಿದ್ದರಾದರೂ ಸ್ಥಳೀಯರ ಸಮಯಪ್ರಜ್ಞೆ ಹಾಗೂ ಆಕ್ರೋಶದಿಂದ ಇದು ತಪ್ಪಿದೆ. ಕೇವಲ 97,000 ರೂ. ದೋಚಿದ್ದಾರೆ ಎಂದಿದ್ದಾರೆ. ಈ ಸಂಬಂಧ ಅವಾಂತಿಪೋರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕಳೆದ ಜುಲೈನಲ್ಲಿ ಹಿಜ್ಬುಲ್‌ ಮುಜಾ ಹಿದೀನ್‌ ಉಗ್ರ ಸಂಘಟನೆ ಅನ್ಸಾರ್‌ ಘಾಜ್ವಾಟ್‌ ಅಲ್‌-ಹಿಂದ್‌ನನ್ನು ಸಂಘಟನೆ ಮುಖ್ಯಸ್ಥ ಎಂದು ಪ್ರಕಟಿಸಿತ್ತು. ಆತ ಈ ಭಾಗದಲ್ಲಿ ಉಗ್ರ ಚಟುವಟಿಕೆ ಜಾಸ್ತಿಗೊಳಿಸಿದ್ದ. ಈ ಘಟನೆಯ ಹಿಂದೆಯೂ ಆತನೇ ಇರಬಹುದೆಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next