Advertisement

ಉಗ್ರ ನಂಟು: ಶಿರಸಿ ಯುವಕ ಸೆರೆ

12:11 AM Nov 12, 2020 | mahesh |

ಶಿರಸಿ/ಹೊಸದಿಲ್ಲಿ: ಪಾಕಿಸ್ಥಾನದ ಲಷ್ಕರ್‌-ಎ- ತಯ್ಯಬಾ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಡಿ ಶಿರಸಿ ಹೊರವಲಯದ ಅರೇಕೊಪ್ಪ ಗ್ರಾಮದ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಪಶ್ಚಿಮ ಬಂಗಾಲ ವಿಭಾಗದ ತಂಡ ಬುಧವಾರ ಬಂಧಿಸಿ ಕರೆದೊಯ್ದಿದೆ.

Advertisement

ಗ್ರಾ.ಪಂ. ಮಾಜಿ ಸದಸ್ಯರೊಬ್ಬರ ಮಗ ಸಯ್ಯದ್‌ ಇದ್ರಿಸ್‌ ಸಾಬ್‌ ಮುನ್ನಾ ಎಂಬಾತ ಬಂಧಿತ. ಈತ ಪಾಕಿಸ್ಥಾನದ ಲಷ್ಕರ್‌-ಎ-ತಯ್ಯಬಾ ಸಂಘಟನೆಯ ಸ್ಲಿàಪರ್‌ ಸೆಲ್‌ಗೆ ಯುವಕರನ್ನು ನೇಮಕ ಮಾಡಲು ನೆರವಾಗುತ್ತಿದ್ದ. ಅಲ್ಲದೆ ಸಾಮಾಜಿಕ ತಾಣಗಳನ್ನು ಬಳಸಿ ಈ ಸಂಘಟನೆಗೆ ಯುವಕರನ್ನು ಸೇರಿಸುವ ಮತ್ತು ಅವರನ್ನು ಪ್ರಚೋದಿಸುವ ಮೂಲಕ ಯುವಕರನ್ನು ಸಮಾಜವಿದ್ರೋಹಿ ಕೆಲಸಕ್ಕೆ ಅಣಿ ಮಾಡುತ್ತಿದ್ದ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಕಳೆದ ತಿಂಗಳು 2 ಬಾರಿ ಯುವಕನ ವಿಚಾರಣೆ ನಡೆಸಿದ್ದರು. ನಂಟು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಶಿರಸಿಗೆ ಆಗಮಿಸಿದ್ದ ಎನ್‌ಐಎ ತಂಡ ಯುವಕನನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದೆ. ಬಳಿಕ ವಶಕ್ಕೆ ಪಡೆದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next