Advertisement

Terrorist Organization: ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

08:13 AM Oct 18, 2024 | Team Udayavani |

ಜೆರುಸಲೇಂ: ಇಸ್ರೇಲ್‌ ಮೇಲೆ 2023ರಲ್ಲಿ ದಾಳಿ ನಡೆಸಿ 1200 ಮಂದಿಯ ಸಾವಿನ ರೂವಾರಿ, ಹಮಾಸ್‌ ಉಗ್ರ ಸಂಘಟನೆ ಮುಖ್ಯಸ್ಥ ಯಾಹ್ಯಾ ಸಿನ್ವರ್‌ ಅಸುನೀಗಿದ್ದಾನೆ.

Advertisement

ದಕ್ಷಿಣ ಗಾಜಾದ ರಫಾದಲ್ಲಿ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಯಾಹ್ಯಾ ಸೇರಿ 3 ಪ್ರಮುಖ ಉಗ್ರರು ಹತರಾಗಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್‌ ಸೇನೆ, “ಈ ಮಾಹಿತಿಯನ್ನು ಪರಿಶೀಲಿಸಿದ್ದು ಇದು ಖಚಿತವಾಗಿದೆ’ ಎಂದು ಹೇಳಿದೆ. ಈತನ ಸಾವು ದೃಢ ಪಡುವುದರೊಂದಿಗೆ ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಬೃಹತ್‌ ಯಶಸ್ಸು ಸಿಕ್ಕಿದಂತಾಗಿದೆ. ಡಿಎನ್‌ಎ ಪರೀಕ್ಷೆಯಲ್ಲೂ ಸಾವನ್ನಪ್ಪಿರುವುದು ಯಾಹ್ಯಾನೇ ಎಂಬುದು ದೃಢಪಟ್ಟಿದೆ.

ಹೌತಿಯ ಶಸ್ತ್ರಾಸ್ತ್ರ ಸಂಗ್ರಹ ತಾಣದ ಮೇಲೆ ದಾಳಿ
ಯೆಮನ್‌ನಲ್ಲಿ ಹೌತಿ ಬಂಡುಕೋರರ ಭೂಗತ ಶಸ್ತ್ರಾಸ್ತ್ರ ಸಂಗ್ರಹ ತಾಣವನ್ನು ಗುರಿಯಾಗಿಸಿ  ಬಿ -2 ಸ್ಪಿರಿಟ್‌ ಸ್ಟೆಲ್ತ ಬಾಂಬರ್‌ ವಿಮಾನಗಳಲ್ಲಿ ಅಮೆರಿಕ ದಾಳಿ ನಡೆಸಿದೆ. ಆದರೆ ದಾಳಿಯಿಂದಾದ ಹಾನಿ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next