Advertisement

ಬಿಡಿಸಲು ಬಂದವರು ಅವನನ್ನೇ ಬಲಿ ಪಡೆದರು!

12:14 PM Feb 27, 2018 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರನೊಬ್ಬನನ್ನು ಬಂಧಿಸಿದ್ದ ತ್ರಾಲ್‌ ಪೊಲೀಸ್‌ ಠಾಣೆಗೆ ಉಗ್ರನ ಸಹಚರರು ಗ್ರೆನೇಡ್‌ ದಾಳಿ ನಡೆಸಿದಾಗ ಆ ಉಗ್ರ ಹತನಾಗಿದ್ದು, ಓರ್ವ ಪೊಲೀಸ್‌ ಪೇದೆಯೂ ಸಾವಿಗೀಡಾಗಿದ್ದಾರೆ. 

Advertisement

ಉಗ್ರನ ಸಹಚರರು ಉಗ್ರನನ್ನು ಬಿಡಿಸಲೆಂದು ಈ ಕೃತ್ಯ ಎಸಗಿದ್ದರು. ಆದರೆ ಉಗ್ರನೇ ಈ ಕೃತ್ಯಕ್ಕೆ ಬಲಿಯಾಗಿದ್ದಾನೆ. ಉಗ್ರ ಮುಷ್ತಾಕ್‌ ಚೊಪನ್‌ ಹಿಜ್ಬುಲ್‌ ಮುಜಾಹಿದೀನ್‌ಗೆ ಸೇರಿದವನು ಎಂದು ಅವರು ಹೇಳಿದ್ದಾರೆ. 

ಈತ ಬುರ್ಖಾ ಧರಿಸಿ ಪೊಲೀಸ್‌ ಠಾಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ, ಆತ ಠಾಣೆಯ ಗೇಟ್‌ ಬಳಿ ಇದ್ದಾಗ ಆತನ ಸಹಚರರು ಗ್ರೆನೇಡ್‌ ದಾಳಿ ನಡೆಸಿದರು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next