ಅಮೃತಸರ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿಗೆ ಮುನ್ನ, ರಾಜ್ಯದಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪಂಜಾಬ್‌ನಲ್ಲಿ ದಾಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಗುಪ್ತಚರ ವರದಿಗಳ ಪ್ರಕಾರ, ಚಂಡೀಗಢ ಮತ್ತು ಮೊಹಾಲಿಯಲ್ಲಿ ದಾಳಿ ನಡೆಸಲು ಐಎಸ್‌ಐ ಪ್ರಯತ್ನಿಸುತ್ತಿದೆ. ಎಚ್ಚರಿಕೆಯ ಪ್ರಕಾರ, ಚಂಡೀಗಢ ಮತ್ತು ಮೊಹಾಲಿಯ ಬಸ್ ನಿಲ್ದಾಣಗಳ ಮೇಲೆ ಭಯೋತ್ಪಾದಕರು ದಾಳಿ ಮಾಡಬಹುದು ಎನ್ನಲಾಗಿದೆ.
ಉಗ್ರರು ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಗುರಿಯಾಗಿಸಬಹುದು ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಪಂಜಾಬ್ ಸರ್ಕಾರಕ್ಕೆ ಮಾಹಿತಿ ರವಾನಿಸಿದ್ದಾರೆ. ಪಂಜಾಬ್ ಸರ್ಕಾರವು ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 24 ರಂದು ಮೊಹಾಲಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಟಾಟಾ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಸುಖಜೀಂದರ್ ರಾಂಧವಾ, ಮಾಜಿ ಸಚಿವರಾದ ಗುರುಕೀರತ್ ಕೋಟ್ಲಿ, ವಿಜಯಿಂದರ್ ಸಿಂಗ್ಲಾ ಮತ್ತು ಪರ್ಮಿಂದರ್ ಪಿಂಕಿ ಸೇರಿದಂತೆ ಹತ್ತು ರಾಜಕಾರಣಿಗಳು ಉಗ್ರರ ಗುರಿಯಾದ್ದಾರೆ ಎಂದು ವರದಿಗಳು ಬಹಿರಂಗಪಡಿಸಿವೆ. ಕೇಂದ್ರ ಗುಪ್ತಚರ ಸಂಸ್ಥೆಗಳು 10 ನಾಯಕರ ಪಟ್ಟಿಯನ್ನು ಪಂಜಾಬ್ ಪೊಲೀಸರೊಂದಿಗೆ ಹಂಚಿಕೊಂಡಿದ್ದು, ಪೊಲೀಸರು ಅವರೆಲ್ಲರ ಭದ್ರತೆಯನ್ನು ಹೆಚ್ಚಿಸಿದ್ದಾರೆ.