ತೇರದಾಳ: ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳಿಂದಲೇ ವಿಳಂಬ ಆಗುತ್ತಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಯ
ಬಿಜೆಪಿ-ಕಾಂಗ್ರೆಸ್ ಸದಸ್ಯರು ಹನಗಂಡಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟಿಸಿದರು.
Advertisement
ಕಳೆದ ಆರು ತಿಂಗಳಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸಗಳಿಗೆ ಅನುಮತಿ ನೀಡುತ್ತಿಲ್ಲ. ಶಾಲೆಗಳಿಗೆ ಕಂಪೌಂಡ್, ಶೆಡ್, ಕೃಷಿ ಹೊಂಡ, ಕೆರೆ ಅಭಿವೃದ್ಧಿ, ಬಾಂದಾರ ಸೇರಿದಂತೆ ಹಲವು ಕೆಲಸಗಳಿಗೆ ತಡೆ ಹಿಡಿಯಲಾಗಿದೆ. ಹೀಗಾದರೆ ಗ್ರಾಮಸ್ಥರಿಗೆ ಏನು ಉತ್ತರ ನೀಡಬೇಕೆಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಇಒ ಬರುವವರೆಗೆ ಬೀಗ ತಗೆಯುವುದಿಲ್ಲ ಎಂದು ಹಠ ಹಿಡಿದು ಕುಳಿತರು. ಹನಗಂಡಿ ಗ್ರಾಮ ಪಂಚಾಯಿತಿಗೆ ಆಗಮಿಸಿದ ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ನೆಲದ ಮೇಲೆ ಕುಳಿತಿದ್ದ ಸದಸ್ಯರ ಕೈ ಹಿಡಿದು ಒಳಗೆ ಕುಳಿತು ಮಾತನಾಡೋಣ ಬನ್ನಿ ಎಂದು ವಿನಂತಿಸಿದರು. ಆದರೆ ಸದಸ್ಯರು ಅದಕ್ಕೆ ಒಪ್ಪದೆ ಇಲ್ಲಿಯೇ ಮಾತನಾಡಿ ಎಂದು ಹಠ ಹಿಡಿದರು. ಕೊನೆಗೆ ಇಒ ಅವರೇ ಸದಸ್ಯರುಗಳ ಜತೆಗೆ ಕುಳಿತರು.
Related Articles
ಮಾತನಾಡಿ, ಕಾಮಗಾರಿ ಶೀಘ್ರ ಆರಂಭಿಸುವುದರ ಜತೆಗೆ ಪಿಡಿಒ ಅವರನ್ನು ಬದಲಾಯಿಸುವುದಾಗಿ ಭರವಸೆ ನೀಡಿದರು. ಸದಸ್ಯರಾದ ಚಂದ್ರಶೇಖರ ಗುಬಚಿ, ಪ್ರಕಾಶ ನಾರವ್ವಗೋಳ, ಕುಮಾರ ಕಾಂಬಳೆ, ನಬೀಸಾಬ ಶಿಲ್ಲೇದಾರ, ಹಸನ್ ಮೌಲಾನಾ ಪಕಾಲಿ, ಮಹಾವೀರ ಬಿದರಿ ಕಮಾಲ್ ರಾಮದುರ್ಗ, ಅನಿಲ ಗುಬಚಿ, ಕರೆಪ್ಪ ದಳವಾಯಿ, ಅಲ್ಲಾಬಕ್ಷ ಅಲಾಸ, ಸಿದ್ದಪ್ಪ ಸೋರಗಾಂವಿ, ಮಂಜುನಾಥ ಕೊಡಗನೂರ, ಪರುಶರಾಮ ಮಾದರ, ರಸೂಲ ಬಾಗಿ, ವಿಠಲ ಮತ್ತಿತರಿದ್ದರು.
Advertisement