Advertisement

SSLC, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

04:58 PM Dec 02, 2024 | Team Udayavani |

ಬೆಂಗಳೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಡಿ.2 ರ ಸೋಮವಾರ ಪ್ರಕಟಿಸಿದೆ.

Advertisement

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಡಿ. 2 ರಿಂದ 16ರ ವರೆಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಪರೀಕ್ಷಾ ಮಂಡಳಿಯ ಪ್ರಕಟಣೆ ತಿಳಿಸಿದೆ.

ಅದರಂತೆ ಮಾರ್ಚ್ 1ರಿಂದ 19ರ ವರೆಗೆ ದ್ವೀತಿಯ ಪಿಯುಸಿ ಪರೀಕ್ಷೆಗಳು ನಡೆದರೆ, ಮಾರ್ಚ್ 20 ರಿಂದ ಏಪ್ರಿಲ್ 2ರ ವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ:

– ಮಾ.1ರ ಶನಿವಾರ:  ಕನ್ನಡ/ಅರೇಬಿಕ್

Advertisement

– ಮಾ.3ರ ಸೋಮವಾರ: ಗಣಿತ/ ಶಿಕ್ಷಣ ಶಾಸ್ತ್ರ/ ತರ್ಕ ಶಾಸ್ತ್ರ/ ವ್ಯವಹಾರ ಅಧ್ಯಯನ

– ಮಾ.4ರ ಮಂಗಳವಾರ: ತಮಿಳು/ತೆಲುಗು/ಮಲಯಾಳಂ/ಮರಾಠಿ/ಉರ್ದು/ಸಂಸ್ಕೃತ/ಫ್ರೆಂಚ್‌

– ಮಾ.5ರ ಬುಧವಾರ: ರಾಜ್ಯಶಾಸ್ತ್ರ/ಸಂಖ್ಯಾಶಾಸ್ತ್ರ

– ಮಾ.7ರ ಶುಕ್ರವಾರ: ಇತಿಹಾಸ/ ಭೌತಶಾಸ್ತ್ರ

– ಮಾ.8ರ ಶನಿವಾರ:  ಹಿಂದಿ

– ಮಾ.10ರ ಸೋಮವಾರ: ಐಚ್ಛಿಕ ಕನ್ನಡ/ ಲೆಕ್ಕ ಶಾಸ್ತ್ರ/ಭೂಗರ್ಭ ಶಾಸ್ತ್ರ/ಗೃಹ ವಿಜ್ಞಾನ

– ಮಾ.12ರ ಬುಧವಾರ: ಮನಃಶಾಸ್ತ್ರ/ರಸಾಯನ ಶಾಸ್ತ್ರ/ಮೂಲ ಗಣಿತ

– ಮಾ.13ರ ಗುರುವಾರ: ಅರ್ಥಶಾಸ್ತ್ರ

– ಮಾ.15ರ ಶನಿವಾರ: ಇಂಗ್ಲೀಷ್‌

– ಮಾ.17ರ ಸೋಮವಾರ: ಭೂಗೋಳ ಶಾಸ್ತ್ರ/ಜೀವ ಶಾಸ್ತ್ರ

– ಮಾ.18ರ ಮಂಗಳವಾರ: ಸಮಾಜಶಾಸ್ತ್ರ/ವಿದ್ಯುನ್ಮಾನ ಶಾಸ್ತ್ರ/ಗಣಕ ವಿಜ್ಞಾನ

– ಮಾ.19ರ ಬುಧವಾರ: ಹಿಂದೂಸ್ತಾನಿ ಸಂಗೀತ/ ಮಾಹಿತಿ ತಂತ್ರಜ್ಞಾನ, ಆಟೋ ಮೋಬೈಲ್‌ ಹೆಲ್ತ್‌ ಕೇರ್‌, ಬ್ಯೂಟಿ ಆಂಡ್‌ ವೆಲ್‌ ನೆಸ್‌ ಪರೀಕ್ಷೆಗಳು ನಡೆಯಲಿವೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ:

– ಮಾ.20ರ ಗುರುವಾರ: ಪ್ರಥಮ ಭಾಷೆ ಕನ್ನಡ/ತೆಲುಗು ಹಿಂದಿ/ಮರಾಠಿ/ತಮಿಳು/ಉರ್ದು/ಇಂಗ್ಲೀಷ್/ ಇಂಗ್ಲೀಷ್‌ (NCERT)/ ಸಂಸ್ಕೃತ

– ಮಾ.22ರ ಶನಿವಾರ: ಸಮಾಜ ವಿಜ್ಷಾನ

– ಮಾ.24ರ ಸೋಮವಾರ: ದ್ವಿತೀಯ ಭಾಷೆ ಇಂಗ್ಲೀಷ್/‌ ಕನ್ನಡ

– ಮಾ.27ರ ಗುರುವಾರ: ಗಣಿತ, ಸಮಾಜ ಶಾಸ್ತ್ರ

– ಮಾ.29ರ ಶನಿವಾರ: ತೃತೀಯ ಭಾಷೆ ವಿಷಯಗಳು

– ಏಪ್ರಿಲ್ 2 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ,

Advertisement

Udayavani is now on Telegram. Click here to join our channel and stay updated with the latest news.

Next