ಸಿಂಧೋಳ ಸಮಾಜದ ಅಲೆಮಾರಿ ಕುಟುಂಬಗಳಿಗೆ ಸರ್ಕಾರದ ಕನಿಷ್ಠ ಸೌಲಭ್ಯ ಈವರೆಗೂ ಮರೀಚಿಕೆಯಾಗಿವೆ.
ಸುಮಾರು 35ಕ್ಕೂ ಹೆಚ್ಚಿರುವ ಟೆಂಟ್ ನಿವಾಸಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಈವರೆಗೂ ದೊರೆತಿಲ್ಲ. ಇದುವರೆಗೂ ದಕ್ಕಿರುವುದು ಒಂದೇ ಚುನಾವಣೆ ಗುರುತಿನ ಚೀಟಿ ಮಾತ್ರ. ಅಲೆಮಾರಿಗಳಿಗೆ ಈ ಹಿಂದೆ ಕೆಚ್ಚಿನಬಂಡಿ ಬಳಿ ನಿವೇಶನ ಒದಗಿಸುವ ಭರಸೆ ನೀಡಲಾಗಿತ್ತು. ಆದರೆ, ಸಿದ್ಧವಾದ ನಿವೇಶನಗಳು ವಾಸಕ್ಕೆ ಯೋಗ್ಯವಲ್ಲವೆಂದು ಅಂದಿನ ಜಿಲ್ಲಾಧಿಕಾರಿ ತಡೆಯೊಡ್ಡಿದ್ದ ಪರಿಣಾಮ ಪುನಃ ಅವರಿವರ ನಿವೇಶನವೇ ಇವರಿಗೆ ಗತಿಯಾಗಿವೆ.
Advertisement
ಈ ಹಿಂದಿನ ಗ್ರಾಪಂ ಮತ್ತು ಇಂದಿನ ಪುರಸಭೆಯೂ ವಸತಿ ಸೌಲಭ್ಯ ನೀಡುವಲ್ಲಿ ವಿಫಲವಾಗಿವೆ. ಪುರಸಭೆಯಿಂದ ನಿವೇಶನ ಸೃಷ್ಠಿಗೆ ಸಾಕಷ್ಟು ಅನುದಾನ ಲಭ್ಯವಿದ್ದರೂ ಜನಪ್ರತಿನಿಧಿಗಳ ಕಾಳಜಿ ಕೊರತೆ ಅಲೆಮಾರಿ ಸಮುದಾಯಕ್ಕೆ ಮುಳುವಾಗಿದೆ.
Related Articles
Advertisement
ಸಿಂಧೋಳ ಸಮಾಜದವರಿಗೆ ಸಿಂಧೋಳ ಸರ್ಟಿಫಿಕೇಟ್ (ಪರಿಶಿಷ್ಟ ಜಾತಿ) ಕೊಡಿಸಲು ಈಗಾಗಲೇ ಸಮಾಜಕಲ್ಯಾಣ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ. ಮೇಲ್ನೋಟಕ್ಕೆ ಸಿಂಧೋಳ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಯಾವುದೇ ತೊಂದರೆಯಿಲ್ಲ. ನಿವೇಶನ, ವಸತಿ ಸೌಲಭ್ಯ ಒದಗಿಸಲು ಪುರಸಭೆ ಮುಖ್ಯಾಧಿಕಾರಿಗೆ
ಲಿಖೀತವಾಗಿ ತಿಳಿಸಲಾಗುವುದು. ಸಿಂಧೋಳ ಸಮಾಜದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಯವರೊಂದಿಗೆ ಚರ್ಚಿಸಲಾಗುವುದು.
ಮಹಾಬಲೇಶ್ವರ, ತಹಶೀಲ್ದಾರ್ ಹಗರಿಬೊಮ್ಮನಹಳ್ಳಿ. ಸಿಂಧೋಳ ಸಮಾಜದ 40 ಕುಟುಂಬದ 200 ಜನ ಟೆಂಟ್‌ನಲ್ಲಿ ವಾಸವಾಗಿದ್ದೇವೆ. ಸರ್ಕಾರದವರು ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ ಕೊಟ್ಟಿದ್ದಾರೆ. ಆದರೆ, ಈವರೆಗೂ ಸಾಕಷ್ಟು ತಹಶೀಲ್ದಾರರು ಬಂದು ಹೋದರೂ ನಮಗೆ ಸಿಂಧೋಳ ಜಾತಿ ಪ್ರಮಾಣಪತ್ರ ಮಾತ್ರ ದೊರೆತಿಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುತ್ತಿಲ್ಲ. ಈ ವಿಷಯವನ್ನು ಈಗೀನ ತಹಶೀಲ್ದಾರ್ ಗಮನಕ್ಕೆ ತಂದಿದ್ದೇವೆ. ಜಾತಿ ಪ್ರಮಾಣಪತ್ರ ಕೊಡಿಸುವ ಭರವಸೆ ನೀಡಿದ್ದಾರೆ. ಟೆಂಟ್ ವಾಸಿಗಳ ಸಮಸ್ಯೆಗಳು ನೂರಾರೂ ಇದ್ದರೂ ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ. ನಿವೇಶನ, ವಸತಿ ಸೌಲಭ್ಯದಿಂದ ಟೆಂಟ್ ವಾಸಿಗಳು ವಂಚಿತರಾಗಿದ್ದಾರೆ.
ನರಸಿಂಹ, ಸಿಂಧೋಳ ಸಮಾಜದ ಅಧ್ಯಕ್ಷ ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಗುರುತಿಸಿ ಟೆಂಟ್ ವಾಸಿಗಳಿಗೆ ನಿವೇಶನ, ವಸತಿ ಸೌಲಭ್ಯವನ್ನು ನೀಡುವಂತೆ ಪುರಸಭೆಯವರಿಗೆ ಆದೇಶಿಸಲಾಗುವುದು. ಸಿಂದೋಳ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಒತ್ತಾಯಿಸಲಾಗುವುದು. ಟೆಂಟ್ ವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂಪುರೇಷ ಸಿದ್ಧಪಡಿಸಲಾಗುವುದು.
ಎಸ್. ಭೀಮಾನಾಯ್ಕ, ಶಾಸಕ, ಹಗರಿಬೊಮ್ಮನಹಳ್ಳಿ ಕ್ಷೇತ್ರ ಸುರೇಶ ಯಳಕಪ್ಪನವರ