Advertisement

ಬ್ರಿಸ್ಬೇನ್‌ ಟೆನಿಸ್‌: ಗಾಯಾಳು ನಿಶಿಕೊರಿ ಔಟ್‌

07:20 AM Dec 24, 2017 | |

ಟೋಕಿಯೊ: ಜಪಾನ್‌ನ ಖ್ಯಾತ ಸಿಂಗಲ್ಸ್‌ ಟೆನಿಸ್‌ ಆಟಗಾರ ಕೀ ನಿಶಿಕೊರಿ ಮುಂಬರುವ ಬ್ರಿಸ್ಬೇನ್‌ ಅಂತಾರಾಷ್ಟ್ರೀಯ ಟೆನಿಸ್‌ ಕೂಟದಿಂದ ಹಿಂದೆ ಸರಿದಿದ್ದಾರೆ. ಮಣಿಕಟ್ಟು ಗಾಯಕ್ಕೆ ತುತ್ತಾಗಿರುವ ಅವರು ಇನ್ನೂ ಚೇತರಿಸಕೊಂಡಿಲ್ಲ.

Advertisement

“ವರ್ಷಾರಂಭದ ಕೂಟವನ್ನು ಕಳೆದುಕೊಳ್ಳುತ್ತಿರುವುದಕ್ಕೆ ತುಂಬಾ ನೋವಾಗುತ್ತಿದೆ. ಗಾಯದ ಕಾರಣದಿಂದ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಎಂದು ನಿಶಿಕೊರಿ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಆಗಸ್ಟ್‌ನಲ್ಲಿ ನಡೆದ ಸಿನ್ಸಿನಾಟಿ ಮಾಸ್ಟರ್ ಟೆನಿಸ್‌ ಪಂದ್ಯಾವಳಿಯ ವೇಳೆ ನಿಶಿಕೊರಿ ಗಾಯಾಳಾಗಿದ್ದರು. ಕಳೆದ ತಿಂಗಳು ಶಸ್ತ್ರಚಿಕಿತ್ಸೆ ಮಾಡಿಕೊಂಡು ಬ್ರಿಸ್ಬೇನ್‌ ಪಂದ್ಯಾವಳಿಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಇದು ಹುಸಿಯಾಗಿದೆ. ಸದ್ಯ ನಿಶಿಕೊರಿ ರ್‍ಯಾಂಕಿಂಗ್‌ 22ಕ್ಕೆ ಇಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next