Advertisement

‘Tennis Hall of Fame’ ಪೇಸ್‌, ವಿಜಯ್‌ ಅಮೃತ್‌ರಾಜ್‌ಗೆ ಗೌರವ

11:48 PM Jul 21, 2024 | Team Udayavani |

ನ್ಯೂಪೋರ್ಟ್‌ (ಯುಎಸ್‌ಎ): ಭಾರತದ ಟೆನಿಸ್‌ ದಂತಕತೆಗಳಾಗಿರುವ ಲಿಯಾಂಡರ್‌ ಪೇಸ್‌ ಮತ್ತು ವಿಜಯ್‌ ಅಮೃತ್‌ರಾಜ್‌ ಅವರು ಪ್ರತಿಷ್ಠಿತ “ಟೆನಿಸ್‌ ಹಾಲ್‌ ಆಫ್ ಫೇಮ್‌’ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಈ ಗೌರವ ಸಂಪಾದಿಸಿದ ಏಷ್ಯಾದ ಮೊದಲ ಟೆನಿಸಿಗರು.

Advertisement

51 ವರ್ಷದ ಲಿಯಾಂಡರ್‌ ಪೇಸ್‌ 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹಿರಿಮೆ ಹೊಂದಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ 8, ಮಿಶ್ರ ಡಬಲ್ಸ್‌ನಲ್ಲಿ 10 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದಾರೆ. “ಆಟಗಾರರ ವಿಭಾಗ’ದಲ್ಲಿ ಈ ಪ್ರಶಸ್ತಿಗೆ ಪೇಸ್‌ ಅವರನ್ನು ಆಯ್ಕೆ ಮಾಡಲಾಯಿತು.

ಪುತ್ರಿ ಅಯಾನಾ ಪೇಸ್‌ ಅವರಿಂದ ಲಿಯಾಂಡರ್‌ ಪೇಸ್‌ “ಹಾಲ್‌ ಆಫ್ ಫೇಮ್‌’ ಪದಕ ಸ್ವೀಕರಿಸಿದರು.
70 ವರ್ಷದ ವಿಜಯ್‌ ಅಮೃತ್‌ರಾಜ್‌ 70ರ ದಶಕದಲ್ಲೇ ಭಾರತೀಯ ಟೆನಿಸ್‌ಗೆ ಶ್ರೀಮಂತಿಕೆ ಹಾಗೂ ಘನತೆಯನ್ನು ತಂದಿತ್ತ ಆಟಗಾರ. 2 ಸಲ ವಿಂಬಲ್ಡನ್‌ ಮತ್ತು ಯುಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ ಹೆಗ್ಗಳಿಕೆ ಇವರದು. 1974 ಮತ್ತು 1987ರಲ್ಲಿ ಭಾರತ ತಂಡವನ್ನು ಡೇವಿಸ್‌ ಕಪ್‌ ಫೈನಲ್ಸ್‌ಗೆ ಕೊಂಡೊಯ್ಯುವಲ್ಲಿ ಅಮೃತ್‌ರಾಜ್‌ ಪಾತ್ರ ಮಹತ್ವದ್ದಾಗಿತ್ತು. ಟೆನಿಸ್‌ ಫಾರ್ಮ್ನ ಉತ್ತುಂಗದಲ್ಲಿದ್ದಾಗ ಸಿಂಗಲ್ಸ್‌ನಲ್ಲಿ 18ನೇ ಹಾಗೂ ಡಬಲ್ಸ್‌ನಲ್ಲಿ 23ನೇ ರ್‍ಯಾಂಕ್‌ ಹೊಂದಿದ್ದರು.
“ಕಾಂಟ್ರಿಬ್ಯುಟರ್‌ ಕೆಟಗರಿ’ಯಲ್ಲಿ ರಿಚರ್ಡ್‌ ಇವಾನ್ಸ್‌ ಅವರೊಂದಿಗೆ ವಿಜಯ್‌ ಅಮೃತ್‌ರಾಜ್‌ ಅವರನ್ನು ಈ ಪ್ರಶಸ್ತಿಗೆ ಆರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next