Advertisement

ತನ್ನದೇ ಟೆನಿಸ್‌ ಕೂಟದ ಫೈನಲ್‌ ತಲುಪಿದ ಜೊಕೋ

09:44 PM Jun 21, 2020 | Sriram |

ಝದಾರ್‌ (ಕ್ರೊವೇಶಿಯಾ): ತಾನೇ ಸಂಘಟಿಸಿದ ಪ್ರದರ್ಶನ ಟೆನಿಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಜೊಕೋವಿಕ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಇಲ್ಲಿನ “ವಿನ್‌ಜಿಕ್‌ ಟೆನಿಸ್‌ ಕಾಂಪ್ಲೆಕ್ಸ್‌’ನ ಆವೆಯಂಗಳದಲ್ಲಿ ನಡೆದ ಆ್ಯಡ್ರಿಯಾ ಟೂರ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಜೊಕೋವಿಕ್‌ ಮೊದಲೆರಡೂ ಸಿಂಗಲ್ಸ್‌ ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಸುತ್ತಿಗೆ ನೆಗೆದರು. ಮೊದಲ ಪಂದ್ಯದಲ್ಲಿ ಅವರು ಸರ್ಬಿಯಾದವರೇ ಆದ ಪೇಜ ಕ್ರಿಸ್ಟಿನ್‌ ವಿರುದ್ಧ 4-3, 4-1 ಅಂತರದ ಗೆಲುವು ಸಾಧಿಸಿದರು. ಬಳಿಕ ತವರಿನ ನೆಚ್ಚಿನ ಆಟಗಾರ ಬೋರ್ನ ಕೊರಿಕ್‌ ವಿರುದ್ಧ 4-1, 4-3 ಅಂತರದ ಜಯ ಒಲಿಸಿಕೊಂಡರು.

ಇದು ಆ್ಯಡ್ರಿಯಾ ಟೂರ್‌ ಟೆನಿಸ್‌ ಕೂಟದ 2ನೇ ಹಂತದ ಸ್ಪರ್ಧೆ. ಬೆಲ್ಗ್ರೇಡ್ ‌ನ‌ಲ್ಲಿ ನಡೆದ ಮೊದಲ ಲೆಗ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಚಾಂಪಿಯನ್‌ ಆಗಿದ್ದರು. ತೃತೀಯ ಸುತ್ತಿನ ಸ್ಪರ್ಧೆ ಜೂ. 27 ಮತ್ತು 28ರಂದು ಮೊಂಟೆನೆಗ್ರೊದಲ್ಲಿ ನಡೆಯಲಿದೆ. ಅಂತಿಮ ಸುತ್ತಿನ ತಾಣ ಬಾಂಜ ಲುಕಾ (ಜು. 3 ಮತ್ತು 4).

 

Advertisement

Udayavani is now on Telegram. Click here to join our channel and stay updated with the latest news.

Next