Advertisement
ಇದು ಕೊಕೊ ಗಾಫ್ ಗೆದ್ದ ಎರಡನೇ ಸಿಂಗಲ್ಸ್ ಹಾಗೂ ಮೊದಲ ಕ್ಲೇ ಕೋರ್ಟ್ ಪ್ರಶಸ್ತಿ. ಮೊದಲ ಪ್ರಶಸ್ತಿ 2019ರಲ್ಲಿ ಆಸ್ಟ್ರಿಯಾದ ಲೀಂಝ್ ಟೆನಿಸ್ ಕೂಟದಲ್ಲಿ ಒಲಿದಿತ್ತು.
ವನಿತಾ ಡಬಲ್ಸ್‌ನಲ್ಲಿ ಅವರು ಅಮೆರಿಕದವರೇ ಆದ ಕ್ಯಾಟಿ ಮೆಕ್‌ನಾಲಿ ಜತೆಗೂಡಿ ಆ್ಯಂಡ್ರೆಜಾ ಕ್ಲೆಪಾಕ್ (ಸ್ಲೊವೇನಿಯಾ)-ಡರಿಜಾ ಜುರಾಕ್ (ಜೆಕೊಸ್ಲೊವಾಕಿಯಾ) ವಿರುದ್ಧ 6-3, 6-2 ಅಂತರದ ಗೆಲುವು ಒಲಿಸಿಕೊಂಡರು. ಇದರೊಂದಿಗೆ ಕೊಕೊ ಗಾಫ್ 17 ವರ್ಷಗಳ ಬಳಿಕ ಸಿಂಗಲ್ಸ್ ಹಾಗೂ ಡಬಲ್ಸ್ ಪ್ರಶಸ್ತಿಗಳೆರಡನ್ನೂ ಗೆದ್ದ ವಿಶ್ವದ ಅತೀ ಕಿರಿಯ ಆಟಗಾರ್ತಿ ಎನಿಸಿದರು. 2004ರಲ್ಲಿ ಮರಿಯಾ ಶರಪೋವಾ ಈ ದಾಖಲೆ ಸ್ಥಾಪಿಸಿದ್ದರು. ಆಗ ಗಾಫ್ 3 ತಿಂಗಳ ಕೂಸು!
ಗಾಫ್ ಕಳೆದ ವಾರವಷ್ಟೇ ಇಟಾಲಿಯನ್ ಓಪನ್ ಟೆನಿಸ್ ಕೂಟದ ಸೆಮಿಫೈನಲ್ ತನಕ ಪ್ರವೇಶಿಸಿದ್ದರು. ಪಾರ್ಮಾ ಕೂಟದಲ್ಲಿ ಕೇವಲ ಒಂದು ಸೆಟ್ ಕಳೆದುಕೊಂಡು ತಮ್ಮ ಅಮೋಘ ಫಾರ್ಮ್ ಪ್ರದರ್ಶಿಸಿ ಫ್ರೆಂಚ್ ಓಪನ್‌ಗೆ ಹೊಸ ಸ್ಫೂರ್ತಿಯಿಂದ ಸಜ್ಜಾದರು.