Advertisement
ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೆಸರುಗದ್ದೆ ಆಟ ಕೇವಲ ಕ್ರೀಡೆಗೆ ಮಾತ್ರ ಹೊಂದಿಕೊಳ್ಳದೆ ಕೃಷಿ ಚಟುವಟಿಕೆಗಳಿಗೂ ಪೇÅರಣೆ ನೀಡುವಂತಾಗಬೇಕು. ಇಂದಿನ ಯುವಜನತೆ ಕೃಷಿಯ ಬಗ್ಗೆ ನಿರಾಸಕ್ತಿಯಿಂದಾಗಿ ಕೃಷಿ ಇಂದು ಅವನತಿಯ ಅಂಚಿಗೆ ತಲುಪಿದೆ. ಕೆಸರಿನ ಬಗ್ಗೆ ಆಸಕ್ತಿ ಬೆಳೆಸುವ ಮೂಲಕ ನಮ್ಮ ಹಿರಿಯರು ಮಾಡಿಟ್ಟ ಕೃಷಿ ಭೂಮಿಯನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.
ತಾ.ಪಂ. ಸದಸ್ಯ ಧನಂಜಯ ಕುಂದರ್, ಯುವಜನ ಸಬಲೀಕರಣ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಸೀ¤Åಶಕ್ತಿ ಒಕ್ಕೂಟದ ಅಧ್ಯಕ್ಷೆ ಜಯಂತಿ, ಅಂಜನಾ ಮಾತೃ ಮಂಡಳಿಯ ಅಧ್ಯಕ್ಷೆ ಶಾಂತ, ಧರ್ಮಸ್ಥಳ ಗ್ರಾಮಾಭಿವೃದ್ದಿಯ ಉಮ, ಉದ್ಯಮಿಗಳಾದ ಗೋಪಾಲಕೃಷ್ಣ ಶೆಟ್ಟಿ, ನಿತ್ಯಾನಂದ ಕೆಮ್ಮಣ್ಣು, ಗ್ರಾ.ಪಂ. ಸದಸ್ಯೆ ಕಲ್ಪನಾ ಸುರೇಶ್, ಅಣ್ಣಯ್ಯ ಪಾಲನ್, ಸತೀಶ್ ನಾಯ್ಕ, ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಕೊಜಕೊಳಿ , ಅರ್ಚಕ ಅಶೋಕ್ ಕೋಟ್ಯಾನ್ ಉಪಸ್ಥಿತರಿದ್ದರು. ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ಪಾಲನ್ ವಂದಿಸಿದರು. ಸುಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.