Advertisement

ಅಂಪಾಯರ್‌ ಮುಖಕ್ಕೆ ಕೆನಡಾ ಟೆನಿಸಿಗನ ಚೆಂಡಿನೇಟು!

03:45 AM Feb 07, 2017 | |

ಒಟ್ಟಾವ (ಕೆನಡಾ): ಬ್ರಿಟನ್‌ ವಿರುದ್ಧದ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯದ ವೇಳೆ ಸೋಲಿನ ಹತಾಶೆಯಿಂದ ಆಟಗಾರನೊಬ್ಬ ಕ್ರೀಡಾಂಗಣದಲ್ಲೇ ಅನುಚಿತ ವರ್ತನೆ ತೋರಿ ಅನರ್ಹಗೊಂಡ ಘಟನೆ ಕೆನಡಾದ ಒಟ್ಟಾವದಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ತೆಗೆದು ಕೊಂಡ ಕೂಟದ ಸಂಘಟಕರು ಕ್ರೀಡಾಂಗಣ ದಲ್ಲಿ ಅಸಭ್ಯ ವರ್ತನೆ ತೋರಿದ 17ರ ಹರೆಯದ ಡೆನ್ನಿಸ್‌ ಶಪವೊಲೋವ್‌ ಅವರನ್ನು ಕೂಟದಿಂದ ಹೊರದಬ್ಬಿದ್ದಾರೆ. ಮಾತ್ರವಲ್ಲ, ಬ್ರಿಟನ್‌ ತಂಡದ ಆಟಗಾರನನ್ನು ವಿಜೇತ ಎಂದು ಘೋಷಿಸಲಾಗಿದೆ. ವಿಜೇತ ಬ್ರಿಟನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

Advertisement

ಆತಿಥೇಯ ಕೆನಡಾ ಮತ್ತು ಬ್ರಿಟನ್‌ ನಡುವಿನ ನಿರ್ಣಾಯಕ ಪಂದ್ಯ ನಡೆಯುತ್ತಿತ್ತು. ಸಿಂಗಲ್ಸ್‌ನಲ್ಲಿ ಕೆನಡಾದ ಡೆನ್ನಿಸ್‌ ಶಪವೊ ಲೋವ್‌ಗೆ ಬ್ರಿಟನ್‌ನ  ಕೈಲ್‌ ಎಡ್ಮಂಡ್‌ ಎದುರಾಳಿಯಾಗಿದ್ದರು. ಈ ವೇಳೆ ಶಪವೊಲೋವ್‌ 1-2ರಿಂದ ಹಿಂದಿದ್ದರು. ಒತ್ತಡದಲ್ಲಿದ್ದ ಡೆನ್ನಿಸ್‌ ಅಂಕವೊಂದನ್ನು ಕಳೆದುಕೊಂಡರು. ಈ ವೇಳೆ ಕೈಯಲ್ಲಿದ್ದ ಚೆಂಡನ್ನು ತೆಗೆದು ಸಿಟ್ಟು, ಹತಾಶೆಯಿಂದ ಪ್ರೇಕ್ಷಕರತ್ತ ಎಸೆದರು. ಇದು ನೇರವಾಗಿ ಅಂಪಾಯರ್‌ ಅರ್ನಾಡ್‌ ಗಾಬಾಸ್‌ ಮುಖಕ್ಕೆ ಹೋಗಿ ಬಡಿಯಿತು. ಸ್ವಲ್ಪ ಹೊತ್ತು ಅಂಪಾಯರ್‌ ಕುಳಿತಲ್ಲಿಯೇ ಕಣ್ಣಿಗೆ ಕೈಹಿಡಿದುಕೊಂಡರು. ತನ್ನ ತಪ್ಪೇನು ಎನ್ನುವುದು ಆ ವೇಳೆ ಶಪವೊ ಲೋವ್‌ಗೆ ಅರ್ಥವಾಗಿತ್ತು. ಅಂಪಾಯರ್‌ ಬಳಿ ಬಂದು ವಿಚಾ ರಿಸಿದರು. ಆಗ ಕೆಲಹೊತ್ತು ಪಂದ್ಯ ನಿಂತಿತು. 

ಅಂಪಾಯರ್‌ ಗಾಬಾಸ್‌ ಕಣ್ಣಿನ ಸಮೀಪ ಊದಿಕೊಂಡಿತ್ತು. ಬಳಿಕ ಶಪವೊಲೋವ್‌ ಅವರನ್ನು ಪಂದ್ಯದಿಂದ ಅಮಾನತುಗೊಳಿಸುವ ನಿರ್ಧಾರವನ್ನು ರೆಫ್ರಿ ಬ್ರಿಯಾನ್‌ ಅರ್ಲಿ ಪ್ರಕಟಿಸಿದರು. ಘಟನೆಗಾಗಿ ಶಪವೊಲೋವ್‌ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next