Advertisement

Team India; ತೆಂಡೂಲ್ಕರ್ ಅವರ ಈ ದಾಖಲೆ ವಿರಾಟ್ ಮುರಿಯುವುದು ಕಷ್ಟ: ಬ್ರಿಯಾನ್ ಲಾರಾ

02:57 PM Dec 07, 2023 | Team Udayavani |

ಮುಂಬೈ: ಟೀಂ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರು ಇತ್ತೀಚೆಗಷ್ಟೇ ಮುಗಿದ ಏಕದಿನ ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆ ಮುರಿದಿದ್ದರು. ವಿಶ್ವಕಪ್ ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 50ನೇ ಏಕದಿನ ಶತಕ ಬಾರಿಸಿದ್ದರು.

Advertisement

ಆದರೆ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಕೊಹ್ಲಿ ಸರಿಗಟ್ಟುವ ಬಗ್ಗೆ ಮಾತುಕತೆಗಳು ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. 35 ವರ್ಷದ ಭಾರತೀಯ ಬ್ಯಾಟರ್ ಈಗಾಗಲೇ 80 ಅಂತರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಆದರೆ ಮುಂದಿನ ವರ್ಷ ಕೇವಲ ಐದು ಏಕದಿನ ಪಂದ್ಯಗಳನ್ನು ಟೀಂ ಇಂಡಿಯಾ ಆಡುತ್ತಿದೆ. ಮತ್ತೊಂದೆಡೆ ಟಿ20ಯಲ್ಲಿ ವಿರಾಟ್ ಅವರ ಭವಿಷ್ಯದ ಬಗ್ಗೆ ಇನ್ನೂ ಗೊಂದಲಗಳಿವೆ.

ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ ಅವರು ವಿರಾಟ್ ಕೊಹ್ಲಿ ಅವರ ನೂರು ಶತಕದ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ನೂರು ಶತಕ ಹೊಡೆಯುವುದು ಕಷ್ಟ ಎಂದಿದ್ದಾರೆ.

“ಈಗ ಕೊಹ್ಲಿಗೆ ಎಷ್ಟು ವಯಸ್ಸಾಗಿದೆ? 35. ಅವರು 80 ಶತಕ ಬಾರಿಸಿದ್ದಾರೆ, ಆದರೆ ಇನ್ನೂ 20 ಬೇಕು. ಅವರು ಪ್ರತಿ ವರ್ಷ ಐದು ಶತಕಗಳನ್ನು ಗಳಿಸಿದರೆ ಸಚಿನ್ ಅವರನ್ನು ಸರಿಗಟ್ಟಲು ಇನ್ನೂ ನಾಲ್ಕು ವರ್ಷಗಳು ಬೇಕಾಗುತ್ತವೆ. ಆಗ ಕೊಹ್ಲಿಗೆ 39 ವರ್ಷವಾಗುತ್ತದೆ. ಇದು ತುಂಬಾ ಕಠಿಣ ಕೆಲಸ” ಎಂದು ಲಾರಾ ಹೇಳಿದರು.

ಕೊಹ್ಲಿಗೆ ಅಂತಾರಾಷ್ಟ್ರೀಯ ಶತಕಗಳ ಶತಕ ತಾರ್ಕಿಕವಾಗಿ ತೋರುತ್ತಿಲ್ಲ ಎಂದು ಕೆರಿಬಿಯನ್ ಲೆಜೆಂಡ್ ಹೇಳಿದರು.

Advertisement

“ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಯಾರೂ ಸಾಧ್ಯವಿಲ್ಲ. ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರೆ ಎಂದು ಹೇಳುವವರು ಕ್ರಿಕೆಟ್ ತರ್ಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. 20 ಶತಕಗಳು ಬಹಳ ದೂರದಲ್ಲಿವೆ. ಹೆಚ್ಚಿನ ಕ್ರಿಕೆಟಿಗರು ತಮ್ಮ ಇಡೀ ವೃತ್ತಿಜೀವನದಲ್ಲಿ ಅದನ್ನು ಗಳಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

“ವಯಸ್ಸು ಯಾರಿಗೂ ನಿಲ್ಲುವುದಿಲ್ಲ. ಕೊಹ್ಲಿ ಇನ್ನೂ ಹಲವು ದಾಖಲೆಗಳನ್ನು ಮುರಿಯುತ್ತಾರೆ ಆದರೆ 100 ಶತಕಗಳು ಅತ್ಯಂತ ಕಷ್ಟಕರವೆಂದು ತೋರುತ್ತದೆ” ಎಂದು ಬ್ರಿಯಾನ್ ಲಾರಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next