Advertisement
ಪ್ರತಿ ವರ್ಷವೂ ಸಚಿನ್ ಹುಟ್ಟು ಹಬ್ಬವೆಂದರೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂಭ್ರಮ. ವಿಶ್ವದಾದ್ಯಂತ ಸಡಗರದಿಂದ ಹುಟ್ಟು ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ತನ್ನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಸಚಿನ್ ಆಚರಿಸಿಕೊಳ್ಳಲಿಲ್ಲ. ಆರೋಗ್ಯ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಸರಳವಾಗಿ ಆಚರಿಸಿದರು. ಈ ವೇಳೆ ಸಚಿನ್ ಸಂದರ್ಶನವೊಂದರಲ್ಲಿ ಮಾತನಾಡಿ ಹಲವು ಮಹತ್ವದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ, ಸಂದರ್ಶನದ ವಿವರ ಇಲ್ಲಿದೆ ಓದಿ.
“ದೈನಂದಿನ ಕೆಲಸವನ್ನು ವ್ಯಾಯಾಮ ನಡೆಸುವ ಮೂಲಕ ಆರಂಭಿಸುತ್ತೇನೆ, ಬಳಿಕ ಸಚಿನ್ ನ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ (ಎಸ್‌ಆರ್‌ಟಿಎಸ್‌ಎಂ) ಜತೆಗೆ ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಬಳಿಕ ಹೆಂಡತಿ, ಮಕ್ಕಳ ಜತೆ ಸ್ವಲ್ಪ ಹೊತ್ತು ಹರಟೆ, ಜತೆಗೆ ನನ್ನ ತಾಯಿಗೂ ಈಗ ನನ್ನ ಜತೆ ಹೆಚ್ಚು ಕಾಲ ಕಳೆಯಲು ಅವಕಾಶ ಸಿಕ್ಕಿದೆ. 70ರ ದಶಕದ ಹಾಡುಗಳನ್ನು ಕೇಳುತ್ತೇನೆ, ಸಿನಿಮಾ ಹಾಗೂ ಟಿವಿ ಕಾರ್ಯಕ್ರಮ ನೋಡುತ್ತೇನೆ’. ಕೋವಿಡ್-19 ಮುಗಿದ ಬಳಿಕ ಕ್ರಿಕೆಟ್‌ಗೆ ಮತ್ತೆ ಮರಳಿದ ಸಮಯದಲ್ಲಿ ಕ್ರಿಕೆಟಿಗರಿಗೆ ಎದುರಾಗುವ ಸವಾಲುಗಳೇನು?
“ಸದ್ಯದ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಯಾವಾಗ ಅಂತ್ಯವಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ದಿಗ್ಬಂಧನ ಮುಗಿದ ಬಳಿಕ ಕ್ರಿಕೆಟಿಗರಿಗೆ ಸಹಜ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ಕಷ್ಟವಾಗಬಹುದು. ಜತೆಗೆ ಫಿಟೆ°ಸ್ ಟ್ರ್ಯಾಕ್‌ಗೆ ಮರಳುವುದಕ್ಕೆ ಸುದೀರ್ಘ ಸಮಯ ಹಿಡಿಯಬಹುದು’.
Related Articles
“ಹಾಗೆ ಆಗಿದ್ದೇ ಆದರೆ ನಿಜವಾಗಿಯೂ ವಿಚಿತ್ರ ಭಾವನೆಯನ್ನು ಮೂಡಿಸುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಬ್ಯಾಟ್ಸ್‌ಮನ್ ಸಿಕ್ಸರ್, ಬೌಂಡರಿ ಹೊಡೆದಾಗ, ಬೌಲರ್ ವಿಕೆಟ್ ಕಿತ್ತಾಗ ಅಭಿಮಾನಿಗಳಿಂದ ಸಿಗುವ ವಿಶೇಷ ಸ್ಫೂರ್ತಿಯ ಶಕ್ತಿಯಿಂದ ಮತ್ತಷ್ಟು ಚೆನ್ನಾಗಿ ಆಡಲು ಸಾಧ್ಯವಾಗುತ್ತದೆ. ಅದೇ ಇಲ್ಲದೆ ಇದ್ದಾಗ ಬಹುಶಃ ನೆಟ್ ಅಭ್ಯಾಸ ನಡೆಸಿದಂತೆ ವಾತಾವರಣ ನಿರ್ಮಾಣವಾಗಬಹುದು’.
Advertisement
ಐಪಿಎಲ್ ರದ್ದಾದರೆ ಎಷ್ಟು ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಬಹುದು?“ಐಪಿಎಲ್ ಅನ್ನೇ ನಂಬಿಕೊಂಡಿದ್ದ ಹಲವಾರು ಜನರ ಮೇಲೆ ಕೆಟ್ಟ ಪರಿಣಾಮ ಬೀಳಬಹುದು. ಇದೆಲ್ಲದಕ್ಕಿಂತ ಹೆಚ್ಚಾಗಿ ಲಾಕ್‌ಡೌನ್ ಯಾಕೆ ಆಗಿದೆ ಎನ್ನುವುದನ್ನು ನಾವೆಲ್ಲ ಮೊದಲು ಅರಿತು ಕೊಳ್ಳಬೇಕಿದೆ. ಎಲ್ಲದಕ್ಕಿಂತ ಹೆಚ್ಚಾಗಿ ದೇಶ ಮೊದಲು ಎನ್ನುವುದನ್ನು ತಿಳಿದುಕೊಳ್ಳಬೇಕು’. ಇಂದು ಸ್ಟಾರ್‌ನ್ಪೋರ್ಟ್ಸ್ ಕನ್ನಡದಲ್ಲಿ ಸಚಿನ್ ಸಂಚಿಕೆ
ಸಚಿನ್ ಹುಟ್ಟುಹಬ್ಬದ ಸಂದರ್ಭ ಸ್ಟಾರ್ ನ್ಪೋರ್ಟ್ಸ್ ಕನ್ನಡ ಚಾನಲ್‌ನಲ್ಲಿ ಸಚಿನ್ ಕುರಿತ 2 ಸಂಚಿಕೆ ಶನಿವಾರ ಪ್ರಸಾರವಾಗಲಿದೆ. ಸ್ಟಾರ್ ನ್ಪೋರ್ಟ್ಸ್ 1 ಹಾಗೂ 2ರಲ್ಲಿ ಸಂಜೆ 7ಕ್ಕೆ ಭಾಗ 1 ಹಾಗೂ ಭಾಗ 2 ರಾತ್ರಿ 9ಕ್ಕೆ ಪ್ರಸಾರಗೊಳ್ಳಲಿದೆ. ಕನ್ನಡದಲ್ಲೂ ಇದರ ಪ್ರಸಾರ ಮಾಡಲಾಗುತ್ತಿದೆ. ಇದೇ ವೇಳೆ ಕನ್ನಡದಲ್ಲಿ ಪ್ಯಾನಲ್ ಚರ್ಚೆ ನಡೆಯಲಿದ್ದು ಕಿರಣ್ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಲಿದ್ದಾರೆ. ರಾಜ್ಯದ ಮಾಜಿ ಕ್ರಿಕೆಟಿಗರಾದ ವಿಜಯ್ ಭಾರದ್ವಾಜ್, ಭರತ್ ಚಿಪ್ಲಿ ಹಾಗೂ ಶ್ರೀನಿವಾಸ್ ಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಟಾರ್ ನ್ಪೋರ್ಟ್ಸ್ ತಿಳಿಸಿದೆ.