Advertisement

ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಟೆಂಡರ್‌

05:05 PM Aug 22, 2020 | Suhan S |

ಹುಣಸಗಿ: ತಾಲೂಕಿನ ಹಿಂದುಳಿದ ಗ್ರಾಮ ಹಾಗೂ ತಾಂಡಾಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು 26 ಕೋಟಿ ರೂ. ಮೊತ್ತದ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಹುಣಸಗಿ ತಾಲೂಕಿನ ಹರಿಜನ, ಗಿರಿಜನ ವಸತಿ ಕಾಲೋನಿಗಳ ಸರ್ವತೋಮುಖ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಸಿ ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ಕೆಬಿಜೆಎನ್‌ ಎಲ್‌ನಿಂದ 26 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಸೊನ್ನಾಪುರ, ಹೊಂಬಳಕಲ್ಲ, ಕೋಟೆಗುಡ್ಡ, ರಾಜವಾಳ, ಮದಲಿಂಗನಾಳ, ಬೂದಿಹಾಳ, ಬಸಾಪುರ, ಕುರೆಕನಾಳ, ಮಾಳನೂರು, ಮಾರಲಬಾವಿ ಮತ್ತು ಯರಕಿಹಾಳ ತಾಂಡಾ, ಡಿಬ್ಬಿ ತಾಂಡಾ, ಚಾಪಿ ತಾಂಡಾ, ರಾಜನಕೋಳೂರು ತಾಂಡಾ, ಪಿ.ಎನ್‌.ತಾಂಡಾ, ಬಸರಿಗಿಡದ ತಾಂಡಾ, ಬಸವನಗರ ತಾಂಡಾ, ಮಾವಿನಗಿಡದ ತಾಂಡಾ, ಕಡದರಹಾಳ ತಾಂಡಾ, ಕೋಳಿಹಾಳ ದೊಡ್ಡ ಹಾಗೂ ಸಣ್ಣ ತಾಂಡಾ, ರಾಜಕುಮಾರ ನಾಯಕ ತಾಂಡಾ, ಮಾರನಾಳ ತಾಂಡಾಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next