Advertisement
ಟೆಂಡರ್ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ ಮೆರ್ಸಸ್ ಮಂಜುನಾಥ ಬೋರ್‌ವೆಲ್ಸ್ ಸೇರಿದಂತೆ ವಿವಿಧ ಜಿಲ್ಲೆಗಳ ಎಂಟು ಬೋರ್‌ವೆಲ್ ಕಂಪನಿಗಳು ಸಲ್ಲಿಸಿದ್ದ ಅರ್ಜಿಯು ಶುಕ್ರವಾರ ನ್ಯಾ. ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆ ಬಂದಿತ್ತು.
Related Articles
Advertisement
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು 2018ರ ನ.29ರಂದು ಸರ್ಕಾರಕ್ಕೆ ಪತ್ರ ಬರೆದು 31 ಪ್ಯಾಕ್‌ಜ್‌ಗಳ ಗುತ್ತಿಗೆಯನ್ನು 12 ಪ್ಯಾಕೇಜ್‌ಗೆ ಇಳಿಸಲು ಸೂಚಿಸಿದ್ದರು. ಇದನ್ನು ಹಣಕಾಸು ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮ್ಮತಿಸಿರಲಿಲ್ಲ.
ಆದರೂ ಡಿ.ದೇವರಾಜ ಅರಸು ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮ 12 ಪ್ಯಾಕೇಜ್‌ಗಳಲ್ಲಿ ಟೆಂಡರ್‌ಗೆ ಅರ್ಜಿ ಆಹ್ವಾನಿಸಿ 2019ರ ಜ.4ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅದೇ ರೀತಿ ಕ್ಲಾಸ್-1 ಹಾಗೂ ವಾರ್ಷಿಕ ಹತ್ತು ಕೋಟಿ ರೂ. ವರೆಗಿನ ಗುತ್ತಿಗೆ ಕೆಲಸ ಮಾಡಿಸಿದ ಗುತ್ತಿಗೆದಾರರು ಮಾತ್ರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
12 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ನೀಡುವುದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಪೈಪೋಟಿ ಇರುವುದಿಲ್ಲ ಹಾಗೂ ಕೆಲವರಿಗೆ ಮಾತ್ರ ಟೆಂಡರ್ ಸಿಗಲಿದೆ. ಹಾಗಾಗಿ ತಿದ್ದುಪಡಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.