Advertisement

ಹತ್ತು ವರ್ಷ ಬಳಿಕ ಕಿರುತೆಗೆ ಸುನಿಲ್‌ ಶೆಟ್ಟಿ ರೀ ಎಂಟ್ರಿ

03:45 AM Apr 06, 2017 | Harsha Rao |

ಮುಂಬೈ: ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಹತ್ತು ವರ್ಷಗಳ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಂಡ್‌ ಟಿವಿಯಲ್ಲಿ ಶೀಘ್ರವೇ ಪ್ರಸಾರವಾಗಲಿರುವ “ಇಂಡಿಯಾಸ್‌ ಅಸ್ಲಿ ಚಾಂಪಿಯನ್‌.. ಹೈ ದಮ್‌’ ಎಂಬ ಕ್ರೀಡಾ ರಿಯಾಲಿಟಿ ಶೋ  ನಡೆಸಿಕೊಡಲಿದ್ದಾರೆ.  ಸಮಾಜದ ಹಲವು ಸ್ಥರಗಳ ಸ್ಪರ್ಧಿಗಳ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ರಿಯಾಲಿಟಿ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದ ಒಂದು ಭಾಗವಾಗಿರುವುದಕ್ಕೆ  ಬಹಳ ಸಂತೋಷವಾಗಿದೆ. ಈ ಕಾರ್ಯಕ್ರಮ ಸ್ಫರ್ಧಿಗಳ ಸ್ಫೂರ್ತಿ, ಪರಿಶ್ರಮ, ಮಾನಸಿಕ ದೃಢತೆಯನ್ನು ಬೇಡುತ್ತದೆ ಎಂದು ಸುನೀಲ್‌ ಶೆಟ್ಟಿ ಈ ಕಾರ್ಯಕ್ರಮದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. 2007ರಲ್ಲಿ ಬಿಗೆಸ್ಟ್‌ ಲೂಸರ್‌ ಜೀತೇಗಾ ಎಂಬ ಟೀವಿ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next