ಬೆಂಗಳೂರು: ರಾಜ್ಯದಲ್ಲಿ ಇಂದು 10 ಹೊಸ ಕೋವಿಡ್-19 ಪ್ರಕರಣಗಳು ದೃಢವಾಗಿದೆ. ರವಿವಾರ 54 ಹೊಸ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ರಾಜ್ಯದಲ್ಲಿ ಇಂದಿನ ಸೋಂಕು ಪತ್ತೆ ಪ್ರಮಾಣ ತುಸು ಸಮಾಧಾನ ತರಿಸುವಂತಿದೆ.
ರಾಜ್ಯದಲ್ಲಿಇಂದು ಕಲಬುರಗಿ, ದಾವಣಗೆರೆ, ಹಾವೇರಿ, ಬಾಗಲಕೋಟೆ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ.
ದಾವಣಗೆರೆಯಲ್ಲಿ ಮೂರು ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ. ಸೋಂಕಿತ ಸಂಖ್ಯೆ 662ರ ಸಂಪರ್ಕದಿಂದ 33 ವರ್ಷದ ಪುರುಷನಿಗೆ ಸೋಂಕು ತಾಗಿದ್ದರೆ, ಸೋಂಕಿತ ಸಂಖ್ಯೆ 663ರ ಸಂಪರ್ಕದಿಂದ 30 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. 56 ವರ್ಷದ ಮಹಿಳೆಗೆ ಸೋಂಕು ದೃಢವಾಗಿದ್ದು, ಸೋಂಕಿತ ಸಂಖ್ಯೆ 667ರ ಸಂಪರ್ಕದಿಂದ ಸೋಂಕು ತಾಗಿದೆ.
ಕಲಬುರಗಿಯ 38 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದು, ಆತನ ಸೋಂಕು ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯ 26 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದು, ಆತ ಮುಂಬೈ ಪ್ರಯಾಣ ಮಾಡಿದ್ದರು ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ 20 ವರ್ಷದ ಯುವಕ ಸೋಂಕಿತನಾಗಿದ್ದು, ಈತ ಅಹಮದಾಬಾದ್ ಪ್ರಯಾಣ ಮಾಡಿದ್ದ. ಬದಾಮಿಯ 28 ವರ್ಷದ ಯುವಕನಿಗೆ ಸೋಂಕು ತಾಗಿದ್ದು, ಸೋಂಕಿತ ಸಂಖ್ಯೆ 688ರ ಸಂಪರ್ಕದಿಂದ ಸೋಂಕು ದೃಢವಾಗಿದೆ.
ವಿಜಯಪುರದ 20 ವರ್ಷದ ಯುವತಿಗೆ ಸೋಂಕು ತಾಗಿದ್ದು, ಸೋಂಕಿತ ಸಂಖ್ಯೆ 511ರ ಸಂಪರ್ಕದಿಂದ ಸೋಂಕು ತಾಗಿದೆ.ಬೀದರ್ ನಲ್ಲಿ ಇಬ್ಬರಿಗೆ ಸೋಂಕು ತಾಗಿದ್ದು 644ರ ಸಂಪರ್ಕದಿಂದ ಇಬ್ಬರು ಸೋಂಕಿತರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ 858ಕ್ಕೆ ಏರಿಕೆಯಾಗಿದೆ.