Advertisement

ಹತ್ತು ದಿನಕಷ್ಟೇ ನೀರು!

06:35 AM Feb 05, 2019 | |

ವಾಡಿ: ಬೇಸಿಗೆ ಬರುವ ಮುಂಚೆಯೇ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಖಾಲಿ ಕೊಡಗಳನ್ನು ಹಿಡಿದು ಸಾರ್ವಜನಿಕರು ಪರದಾಡುತ್ತಿದ್ದಾರೆ. ಪಟ್ಟಣದ ಜನರ ಜಲಮೂಲವಾದ ಸಮೀದ ಕುಂದನೂರು ಗ್ರಾಮದ ಭೀಮಾನದಿ ಸದ್ಯ ನೀರಿಲ್ಲದೆ ಭಣಗುಡುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

Advertisement

ಕಳೆದ ಹತ್ತಾರು ದಿನಗಳಿಂದ ನಗರದ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಜನರ ಜಲ ದಾಹ ನೀಗದಂತಾಗಿ ಕೊಡ ನೀರಿಗಾಗಿ ಅಲೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಪುರಸಭೆ ಸುಪರ್ದಿಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, 50,000 ಜನಸಂಖ್ಯೆಯಿದೆ. ಎಸಿಸಿ ಕಾಲೋನಿ ಎರಡು ವಾರ್ಡ್‌ಗಳಿಗೆ ಎಸಿಸಿ ಕಂಪನಿಯೇ ನೀರು ಸರಬರಾಜು ಮಾಡುತ್ತದೆ. ರೈಲ್ವೆ ಕಾಲೋನಿ ಬಡಾವಣೆಗೆಡ ರೈಲ್ವೆ ಇಲಾಖೆಯೇ ನೀರು ಪೂರೈಸುತ್ತದೆ. ಪುರಸಭೆ ಆಡಳಿತ, ಎಸಿಸಿ ಕಂಪನಿ ಹಾಗೂ ರೈಲ್ವೆ ಇಲಾಖೆಗಳಿಗೆ ಕುಂದನೂರಿನ ಭೀಮಾ ಮತ್ತು ಇಂಗಳಗಿ ಕಾಗಿಣಾ ನದಿಗಳೇ ಜಲಮೂಲಗಳಾಗಿದೆ.

ಆದರೆ, ಈಗ ಈ ಎರಡೂ ನದಿಗಳಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕುಸಿದಿದ್ದು, ಕೇವಲ ಹತ್ತು ದಿನಕ್ಕಾಗುವಷ್ಟು ನೀರು ಮಾತ್ರ ಉಳಿದುಕೊಂಡಿದೆ. ತುಂಬಾ ತಡವಾಗಿ ಜಲಸಂರಕ್ಷಣೆಗೆ ಮುಂದಾಗಿರುವ ಪುರಸಭೆ ಆಡಳಿತ, ನೀರು ಮಿತವಾಗಿ ಬಳಸುವಂತೆ ಪ್ರಕಟಣೆ ಹೊರಡಿಸಿದೆ. ಸೋಮವಾರ (ಫೆ.04)ದಿಂದ ಪಟ್ಟಣದಲ್ಲಿ ಆಟೋ ಪ್ರಚಾರಕ್ಕೆ ಚಾಲನೆ ನೀಡಿರುವ ಪುರಸಭೆ ಅಧಿಕಾರಿಗಳು, ನದಿಯಲ್ಲಿ ನೀರಿಲ್ಲ. ಬಳಕೆಯಲ್ಲಿ ಎಚ್ಚರವಿರಲಿ ಎಂದು ಮನವಿ ಮಾಡುತ್ತಿದ್ದಾರೆ. ಕುಂದನೂರು ಭೀಮಾ ನದಿಪಾತ್ರದಲ್ಲಿ ನೀರಿಲ್ಲವಾಗಿದ್ದು, ಆಟದ ಮೈದಾನದಂತೆ ಗೋಚರಿಸುತ್ತಿದೆ.

ಪುರಸಭೆಗೆ ಸೇರಿದ ಜಾಕ್‌ವೆಲ್‌ ಸ್ಥಳದಲ್ಲಿ ಶೇಖರಣೆಯಾಗಿರುವ ನೀರು ಯಾತಕ್ಕೂ ಸಾಲದಂತಿದೆ. ನೀರಿನಲ್ಲಿ ಮುಳುಗಿರಬೇಕಿದ್ದ ಜಾಕ್‌ವೆಲ್‌ ಬಾವಿ ಹೊರಮುಖವಾಗಿ ಗೋಚರಿಸುತ್ತಿದ್ದು, ನೀರಿನ ಹಾಹಾಕಾರ ಸೃಷ್ಟಿಯಾಗುವ ಸಂದೇಶ ನೀಡುತ್ತಿದೆ. ಪಟ್ಟಣದ ವಿವಿಧ ಬಡಾವಣೆಯಲ್ಲಿರುವ ಬಾವಿ ಮತ್ತು ಕೊಳವೆಗಳನ್ನು ದುರಸ್ತಿಗೆ ಮುಂದಾಗಬೇಕಿದ್ದ ಆಡಳಿತ, ನೀರಡಿಕೆಯಾದ ಬಾವಿ ತೋಡಿದ್ದರಾಯ್ತು ಎಂಬ ಧೋರಣೆಗೆ ಗಂಟುಬಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ಅಕಾರಿಗಳು ಹಾಗೂ ಜನಪ್ರತಿನಿಗಳು ಎಚ್ಚೆತ್ತುಕೊಳ್ಳದಿದ್ದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.

ನದಿಯಲ್ಲಿ ಸಂಪೂರ್ಣ ನೀರು ಬತ್ತಿದ್ದರಿಂದ ವಾಡಿ ಪಟ್ಟಣದಲ್ಲಿ ಸದಸ್ಯ ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಜಲಮಂಡಳಿ ಅಧಿಕಾರಿಗಳೊಂದಿಗೆ ನದಿಗೆ ಭೇಟಿ ನೀಡಿ ನೀರಿನ ಪ್ರಮಾಣ ತಿಳಿದುಕೊಳ್ಳಲಾಗಿದೆ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕಾಗಿಣಾ ನದಿಗೆ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬರ ನಿರ್ವಹಣೆ ಯೋಜನೆಯಡಿ ಪುರಸಭೆಗೆ ಈಗಾಗಲೇ 30 ಲಕ್ಷ ರೂ. ಹಾಗೂ ನದಿಯಲ್ಲಿ ರಿಂಗ್‌ಬೌಂಡ್‌ ನಿರ್ಮಿಸಲು 5 ಲಕ್ಷ ರೂ. ಬಿಡುಗಡೆಯಾಗಿದೆ. ಜನರಿಗೆ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆದೇಶ ನೀಡಿದ್ದಾರೆ. ಸಾರ್ವಜನಿಕರು ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು.
ಮೈನಾಬಾಯಿ ರಾಠೊಡ, ಅಧ್ಯಕ್ಷರು, ವಾಡಿ ಪುರಸಭೆ.
ವಿಠuಲ ಹಾದಿಮನಿ, ಮುಖ್ಯಾಧಿಕಾರಿ

Advertisement

•ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next