Advertisement
ಕೋವಿಡ್ ಭೀತಿಯಿಂದಾಗಿ ದೇವಾಲಯಗಳು ಮತ್ತೆ ಭಕ್ತರ ದರ್ಶನಕ್ಕೆ ತೆರೆಯಲು ಕೇಂದ್ರ ಸರಕಾರದಿಂದ ಸಹಮತ ಬೇಕು. ರಾಜ್ಯ ಸರಕಾರ ಇದೀಗ ಕೇಂದ್ರದ ಅನುಮತಿ ನಿರೀಕ್ಷೆಯಲ್ಲಿದೆ. ಆದರೆ, ಕೇಂದ್ರದ ಅನುಮತಿ ಬರುವುದಕ್ಕಿಂತ ಮೊದಲೇ ರಾಜ್ಯ ಸರಕಾರ ಈ ಬಗ್ಗೆ ಘೋಷಣೆ ಮಾಡಿರುವ ಕಾರಣ ದೇವಳದವರು ಹಾಗೂ ಭಕ್ತರು ಗೊಂದಲಕ್ಕೆ ಸಿಲುಕಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕಟೀಲು, ಕುಕ್ಕೆ, ಉಡುಪಿ ಜಿಲ್ಲೆಯ ಕೊಲ್ಲೂರು, ಮಂದಾರ್ತಿ ದೇವಸ್ಥಾನದಲ್ಲಿ ಆನ್‌ಲೈನ್ ಸೇವೆ ಲಭ್ಯವಿದೆ.
Related Articles
ರಾಜ್ಯದಲ್ಲಿ ಜೂನ್ 1ರಿಂದ ದೇವಸ್ಥಾನ ತೆರೆಯುವ ಬಗ್ಗೆ ರಾಜ್ಯ ಸರಕಾರ ಈಗಾಗಲೇ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರದ ಸಹಮತಕ್ಕಾಗಿ ಕಾಯುತ್ತಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರಕಾರದಿಂದ ಸೂಕ್ತ ನಿರ್ದೇಶನ ಬರುವ ನಿರೀಕ್ಷೆಯಲ್ಲಿದ್ದೇವೆ. ಆ ಬಳಿಕ ರಾಜ್ಯದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ
Advertisement
ನಿರ್ದೇಶನ ಬಂದಿಲ್ಲಜಿಲ್ಲೆಯಲ್ಲಿ ಜೂನ್ 1ರಿಂದ ದೇವಸ್ಥಾನಗಳು ತೆರೆಯುವ ಬಗ್ಗೆ ರಾಜ್ಯ ಸರಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಜಿಲ್ಲೆಯ ದೇವಸ್ಥಾನಗಳ ಪಟ್ಟಿ ಸಿದ್ಧವಿದ್ದು, ಆದೇಶ ಬಂದ ಕೂಡಲೇ ಈ ಬಗ್ಗೆ ಸುತ್ತೋಲೆ ಕಳುಹಿಸಲಾಗುವುದು.
– ಸಿಂಧೂ ಬಿ. ರೂಪೇಶ್, ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ದ.ಕ., ಉಡುಪಿ.