Advertisement

ಸಾಧಕ ಭಜಕರಿಂದ ದೇಗುಲ ಸಾನ್ನಿಧ್ಯ ನಿರಂತರ ನೆಲೆ: ಪರ್ತಗಾಳಿ ಶ್ರೀ

01:56 AM Feb 11, 2020 | Team Udayavani |

ಕಾಸರಗೋಡು: ದೇಗುಲ ಭಗವಂತನ ಪವಿತ್ರ ಆವಾಸ ತಾಣ. ದೇಗುಲದ ಪಾವಿತ್ರ್ಯ ಉಳಿಯಲು ಭಕ್ತರ ನಿತ್ಯ ನಿರಂತರ ಉಪಾಸನೆ ನಡೆಯಬೇಕು. ಇದಕ್ಕಾಗಿ ಭಗವಂತನನ್ನು ಕಟ್ಟಿ ಹಾಕಬೇಕಾಗುತ್ತದೆ. ದೇವರನ್ನು ಕಟ್ಟಿ ಹಾಕುವುದು ಅಂದರೆ ದೇವ ಸಾನ್ನಿಧ್ಯವನ್ನು ಬಂಧಿಸುವುದು ಎಂದು ತಿಳಿಯ ಬೇಕು. ಸಾನ್ನಿಧ್ಯವನ್ನು ಕಟ್ಟಿ ಹಾಕಲು ಭಕ್ತಿ, ಜ್ಞಾನ, ವೈರಾಗ್ಯ ಸಾಧನೆಯಿಂದ ಮಾತ್ರ ಸಾಧ್ಯ. ಹೀಗಾಗಿ ಈ ಸಾಧನೆಯ ಭಜಕ ರಿಂದ ದೇಗುಲ ಸಾನ್ನಿಧ್ಯ ನಿರಂತರ ನೆಲೆ ನಿಲ್ಲುತ್ತಿದ್ದು ಸಾನ್ನಿಧ್ಯ ವೃದ್ಧಿಯಿಂದ ಭಜಕರ ಪ್ರಾರ್ಥನೆ ಸುಲಭವಾಗಿ ಈಡೇರುತ್ತವೆ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್‌ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಪಟ್ಟ ಶಿಷ್ಯ ಶ್ರೀಮದ್‌ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಅನುಗ್ರಹಿಸಿದರು.

Advertisement

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ಇದ್ದು ಹರಿ ಗುರುಗಳ ಸೇವೆಗೈದು ಪಾವನರಾದ ಸಮಾಜದ ಭಜಕ ವೃಂದವನ್ನು ಅನುಗ್ರಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಅಡುಗೆ ಕೋಣೆಯ ಸ್ವತ್ಛತೆ ನೋಡಿ ಆ ಮನೆಯ ಸಂಸ್ಕಾರವನ್ನು ತಿಳಿಯ ಬಹುದು. ದೇವಸ್ಥಾನದ ಸ್ವತ್ಛತೆ ನೋಡಿ ಆ ಊರಿನ ಭಜಕ ವೃಂದದ ಸಂಸ್ಕಾರವನ್ನು ಅಳೆಯ ಬಹುದು ಮಾತ್ರವಲ್ಲ ಊರಿನ ಹೃದಯ ಶ್ರೀಮಂತಿಕೆಯನ್ನು ಅರ್ಥೈಸಲು ಸಾಧ್ಯವಾಗುತ್ತದೆ. ಹೀಗಾಗಿ ಸ್ವತ್ಛತೆಯ ದೇಗುಲ ಊರಿನ ಹೆಬ್ಟಾಗಿಲು ಆಗಿರು ತ್ತದೆ. ಇಲ್ಲಿನ ಪ್ರತಿಬಿಂಬ ಊರಿನಲ್ಲಿ ಪ್ರತಿಬಿಂಬಿಸು ತ್ತದೆ. ದೇಗುಲದ ಪಾವಿತ್ರÂತೆ ಅನ್ನುವುದು ಸಮಾಜದ ಅಭ್ಯುದಯದ ಪ್ರತೀಕ ಎಂದು ಶ್ರೀಗಳು ಅನುಗ್ರಹಿಸಿದರು.

ಆಷಾಢ, ಕಾರ್ತಿಕ, ಮಾಘ ಮತ್ತು ವೈಶಾಖ ಮಾಸಗಳು ದೇವರ ವಿಶೇಷ ಆರಾಧನೆ ಮಾಡಲು ಸೂಕ್ತ ಕಾಲ ಎಂದು ಹಿಂದೆಯೇ ಶಾಸ್ತ್ರಜ್ಞರು ತಿಳಿಸಿದ್ದಾರೆ. ಇದರಲ್ಲಿ ಮಾಘ ಮಾಸ ಅದರಲ್ಲೂ ಶ್ರೇಷ್ಠವಾದದ್ದು. ಈ ಮಾಸದಲ್ಲೇ ಅನೇಕ ಉತ್ಸವಗಳು ನಡೆಯುತ್ತಿದ್ದು ದೇವರ ವೈಭವದ ಆರಾಧನೆ ಈ ಮಾಸದ ಶ್ರೇಷ್ಠತೆ. ಉಭಯ ಶ್ರೀಗಳು ಕಾಸರಗೋಡಿನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ನೀಡಿರುವುದು ಈ ಮಾಘ ಮಾಸದಲ್ಲಿ. ನಾಲ್ಕು ಮಾಸಗಳಲ್ಲಿ ನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ನದಿ ಸ್ನಾನ ಮಾಡಿ ದೇವರ ಆರಾಧನೆ ಮಾಡಬೇಕು ಎನ್ನುತ್ತದೆ ಶಾಸ್ತ್ರ. ಮಾಘ ಮಾಸ ಅತ್ಯಂತ ಚಳಿಯ ಮಾಸ. ಈ ವೇಳೆಯ ನದಿ ಸ್ನಾನ ಅನ್ನುವುದು ಊಹಿಸಲಾಗದ್ದು. ಹೀಗಾಗಿ ಮಾಘ ಮಾಸದ ಆರಾಧನೆ ಕಠಿನವಾದರೂ ದೇವರ ಅನುಗ್ರಹಗಳಿಸಲು ಯೋಗ್ಯ ಎನಿಸಿದೆ. ಇಂದಿನ ಕಾಲದಲ್ಲಿ ನದಿ ಸ್ನಾನ ಅಷ್ಟು ಸುಲಭವಲ್ಲ ಹೀಗಾಗಿ ಇಲ್ಲಿನ ಭಜಕ ವೃಂದ ಮುಂಜಾನೆಯೇ ದೇಗುಲಕ್ಕೆ ಬಂದು ತ್ರಿಕಾಲ ಹರಿ ಗುರುಗಳ ಸೇವೆ ಮಾಡಿ ಕೃಥಾರ್ತರಾಗಿದ್ದಾರೆ. ಈ ಸಮಾಜ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶ್ರೀಗಳು ಅನುಗ್ರಹಿಸಿದರು.

ಹಿರಿಯ ಸ್ವಾಮೀಜಿಗಳು ಆಶೀರ್ವದಿಸಿ ಇಲ್ಲಿನ ದೇಗುಲದ ಭಜಕ ವೃಂದವು ಭಜನೆಯಿಂದ ಭಗವಂತನನ್ನು ವಿಶೇಷವಾಗಿ ಆರಾಧಿಸುವ ಪದ್ಧತಿಯನ್ನು ಶ್ಲಾಘಿಸಿ ಪುರಂದರ ದಾಸರ ಸಮರ್ಪಣೆ ಹೇಗಿತ್ತು ಅನ್ನುವುದನ್ನು ಇದು ತೋರಿಸಿ ಕೊಡುತ್ತದೆ ಎಂದು ಅನುಗ್ರಹಿಸಿದರು.

Advertisement

ದೇಗುಲದ ವೈದಿಕರಿಂದ ಪ್ರಾರ್ಥನೆ ನಡೆಯಿತು. ಆಡಳಿತ ಮೊಕ್ತೇಸರ ಕೆ. ವಿದ್ಯಾಕರ ಮಲ್ಯ ಸ್ವಾಗತಿಸಿದರು. ಎ. ರವೀಂದ್ರ ರಾವ್‌ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಫಲ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದರು.

ಕಲಶಾಭಿಷೇಕ ಅವಕಾಶ ಸುಯೋಗ
ಮಾಘ ಮಾಸದಲ್ಲಿ ತಮ್ಮ ಗುರುಗಳು ಹಾಗೂ ತಾವು ಆಶ್ರಮ ದೀಕ್ಷೆ ಪಡೆದವರು. ಮೊನ್ನೆ ಫೆಬ್ರವರಿ 7ರಂದು ತಾವು ಆಶ್ರಮ ದೀಕ್ಷೆ ಪಡೆದು ಮೂರನೇ ವರ್ಷ. ಅಂದು ಶ್ರೀ ವರದರಾಜ ವೆಂಕಟರಮಣ ದೇವರಿಗೆ ತಾವು ಶತಕಲಶಾಭಿಷೇಕ ನಡೆಸಿದ್ದು ಅದೊಂದು ದೊಡ್ಡ ಸುಯೋಗ. ಸಂನ್ಯಾಸಿ ಬದುಕು ಸಾಗಿಸುವವರಿಗೆ ದೇವರೇ ಸರ್ವಸ್ವ. ಹೀಗಿರುವಾಗ ಮಾಘ ಮಾಸದಲ್ಲಿ ದೇವರಿಗೆ ಶತಕಲಶಾಭಿಷೇಕ ನಡೆದು ತಮ್ಮ ಆಶ್ರಮ ದೀಕ್ಷೆಯ ದಿನ ಆಚರಿಸಿದ್ದು ಪರಮ ಆನಂದ ನೀಡಿದೆ.
-ಶ್ರೀ ವಿದ್ಯಾಧೀಶ ತೀರ್ಥರು

Advertisement

Udayavani is now on Telegram. Click here to join our channel and stay updated with the latest news.

Next