ಶಾಂತಿ, ಸೌಹಾರ್ದದಿಂದ ನಿರ್ಮಿಸಬೇಕು ಎಂಬುದೇ ನಮ್ಮ ಆಶಯ ಎಂದು ಮಂತ್ರಾಲಯ ಮಠದ ಪೀಠಾ ಧಿಪತಿ ಶ್ರೀ
ಸುಬುಧೇಂದ್ರ ತೀರ್ಥರು ಅಭಿಪ್ರಾಯಪಟ್ಟರು.
Advertisement
ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಶ್ರೀಗಳು, ಈಗಾಗಲೇ ಅನೇಕ ಬಾರಿ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದು, ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿಯೇ ಮಂದಿರ ನಿರ್ಮಿಸಬೇಕು ಎಂಬುದು ಶ್ರೀರಾಮನ ಆರಾಧಕರ ಆಶಯವಾಗಿದೆ. ನ್ಯಾಯಾಲಯಗಳು ಕೂಡ ಎಲ್ಲರ ಮನವೊಲಿಕೆ ಮಾಡಿಮಂದಿರ ನಿರ್ಮಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ. ಆದರೆ, ವಿಳಂಬ ಮಾಡದೆ ತ್ವರಿತಗತಿಯಲ್ಲಿ
ಮಾಡಿದರೆ ಸೂಕ್ತ. ಆದರೆ, ಈ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ನಾನು ಹೆಚ್ಚಾಗಿ ಮಾತನಾಡುವುದು ಸರಿಯಲ್ಲ ಎಂದರು.