Advertisement

ತಾಪಮಾನ ಬದಲಾವಣೆ ಸತ್ಯ

06:00 AM Oct 16, 2018 | Team Udayavani |

ವಾಷಿಂಗ್ಟನ್‌: ತಾಪಮಾನ ಬದಲಾವಣೆ ಕುರಿತಂತೆ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ, “ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವುದು ಕಾಣಿಸುತ್ತಿದೆ’ ಎಂದು ಒಪ್ಪಿಕೊಂಡಿದ್ದಾರೆ. ಅದೂ ಭೀಕರ ಚಂಡಮಾರುತದಿಂದ ಅಮೆರಿಕದ ಕೆಲ ರಾಜ್ಯಗಳು ನಲುಗಿದ ಮೇಲೆ ಈ ಹೇಳಿಕೆ ನೀಡಿದ್ದಾರೆ. ಆದರೆ, ತಾಪಮಾನದಲ್ಲಿ ಬದಲಾವಣೆಯಾಗುತ್ತಿದೆ ಎಂಬ ಎಚ್ಚರಿಕೆ ನೀಡಿದ್ದ ವಿಜ್ಞಾನಿಗಳು ರಾಜಕೀಯ ಅಜೆಂಡಾ ಹೊಂದಿದ್ದಾರೆ ಎಂದೂ ಆರೋಪಿಸಿದ್ದಾರೆ. ವಾತಾವರಣ ಬದಲಾವಣೆ ಸತ್ಯವೆಂದು ಒಪ್ಪಿಕೊಂಡರೂ, ವಾತಾವರಣ ದಲ್ಲೇ ಮತ್ತೆ ಬದಲಾಗಬಹುದು, ಹಿಂದಿನ ತಂಪಿನ ಸ್ಥಿತಿಗೆ ಬರಬಹುದು ಎಂದು ಹೇಳುವ ಮೂಲಕ ಟ್ರಂಪ್‌ ಅಚ್ಚರಿ ಮೂಡಿಸಿದ್ದಾರೆ.  ಕಳೆದ ವರ್ಷವಷ್ಟೇ ತಾಪಮಾನ ಬದಲಾವಣೆ ಒಂದು ಸುಳ್ಳು ಎಂದು ಹೇಳಿ ಪ್ಯಾರೀಸ್‌ ಒಪ್ಪಂದದಿಂದ ಹಿಂದೆ ಸರಿಯುವ ತೀರ್ಮಾನ ತೆಗೆದು ಕೊಂಡಿದ್ದರು. 

Advertisement

ಹತ್ಯಾಕಾಂಡದಲ್ಲಿ ಪುಟಿನ್‌?: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹತ್ಯಾಕಾಂಡ ಮತ್ತು ವಿಷ ಪ್ರಾಶನ ಪ್ರಕರಣಗಳಲ್ಲಿ ಬಹುಷಃ ಭಾಗಿಯಾಗಿರ ಬಹುದು. ಅದು ಅಮೆರಿಕದಲ್ಲಿ ಅಲ್ಲ ಎಂದಿದ್ದಾರೆ ಟ್ರಂಪ್‌.  ರಷ್ಯಾದಲ್ಲಿ ಪುಟಿನ್‌ ವಿರೋಧಿಗಳು ನಿಗೂಢವಾಗಿ, ವಿಷ ಪ್ರಾಶನದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ, ಅವರ ಹೇಳಿಕೆ ಮಹತ್ವ ಪಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next