Advertisement

ಹೀರೋ ಟೆಂಪರ್‌ ಜೋರು

02:47 PM Mar 22, 2021 | Team Udayavani |

ಹೊಸಬರ “ಟೆಂಪರ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದ ಈಗ ಬಿಡುಗಡೆಯಾಗುತ್ತಿದೆ.

Advertisement

ಈ ಚಿತ್ರವನ್ನು ಮಂಜು ಕವಿ ನಿರ್ದೇಶಿಸಿದ್ದಾರೆ. ವಿನೋದ್‌ ಕುಮಾರ್‌ ಮತ್ತು ಮೋಹನ್‌ ಬಾಬು ಚಿತ್ರದ ನಿರ್ಮಾಪಕರು. ಆರ್ಯನ್‌ ಸೂರ್ಯ ಈ ಚಿತ್ರದ ನಾಯಕ.

ಇದನ್ನೂ ಓದಿ: ‘ಕಣ್ಣು ಹೊಡೆಯಾಕ ಹಾಡು’ 2 ಕೋಟಿ ವೀಕ್ಷಣೆ: ಶ್ರೇಯಾ ಘೋಷಾಲ್‌ ಫುಲ್ ಖುಷ್‌

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಇಲ್ಲಿ ನಾಯಕ ವಿಭಿನ್ನ ವ್ಯಕ್ತಿತ್ವದವನು. ಒಂದರ್ಥದಲ್ಲಿ ಬಿಂದಾಸ್‌ ಆಗಿರುವ ಆತ ಯಾರನ್ನೂ ಕೇರ್‌ ಮಾಡದೇ ನುಗ್ಗುವ ವ್ಯಕ್ತಿತ್ವ ಆತನದು. ಅದೇ ಕಾರಣಕ್ಕಾಗಿ ಈ ಚಿತ್ರಕ್ಕೆ “ಟೆಂಪರ್‌’ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಎಲ್ಲಾ ವರ್ಗದ ಆಡಿಯನ್ಸ್‌ ಅನ್ನು ಗಮನದಲ್ಲಿಟ್ಟು ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ. ಚಿತ್ರದಲ್ಲಿ ಕಾಶಿಮಾ ನಾಯಕಿ. ಉಳಿದಂತೆ ತಬಲಾ ನಾಣಿ, ಟೆನ್ನಿಸ್‌ ಕೃಷ್ಣ ನಟಿಸಿದ್ದಾರೆ. ನಂಜನಗೂಡು, ಮೈಸೂರು ಮಂಡ್ಯ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next