Advertisement

ವಸತಿ ಕಟ್ಟಡದಿಂದ ಹಾರಿ ತೆಲುಗು ನ್ಯೂಸ್‌ ಆ್ಯಂಕರ್‌ ಆತ್ಮಹತ್ಯೆ

11:26 AM Apr 02, 2018 | udayavani editorial |

ಹೈದರಾಬಾದ್‌ : ತೆಲುಗು ನ್ಯೂಸ್‌ ಚ್ಯಾನಲ್‌ನ ಟಿವಿ ಆ್ಯಂಕರ್‌ ನಿನ್ನೆ ಭಾನುವಾರ ರಾತ್ರಿ ಇಲ್ಲಿನ ತನ್ನ ಫ್ಲ್ಯಾಟ್‌ ನ  ಅಪಾರ್ಟ್‌ಮೆಂಟ್‌ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. 

Advertisement

ಆತ್ಮಹತ್ಯೆ ಮಾಡಿಕೊಂಡಿರುವ ಟಿವಿ ನ್ಯೂಸ್‌ ಆ್ಯಂಕರ್‌ ಮಹಿಳೆ ಆರು ತಿಂಗಳ ಹಿಂದೆ ತನ್ನ ಪತಿಗೆ ವಿಚ್ಛೇದನ ನೀಡಿ ತನ್ನ 14 ವರ್ಷ ಪ್ರಾಯದ ಮಗನೊಂದಿಗೆ ತನ್ನ ಹೆತ್ತವರೊಂದಿಗೆ ವಾಸವಾಗಿದ್ದಳು. ಆಕೆ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ ಆಕೆ ತಾನು ಮನೋ ಖಿನ್ನತೆ ಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. 

ನಿನ್ನೆ ಭಾನುವಾರ ರಾತ್ರಿ ತನ್ನ ಕೆಲಸ ಮುಗಿಸಿ ಮನೆಗೆ ಬಂದ ಮಹಿಳೆಯು ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ಮೃತ ದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. 

ಮಹಿಳೆಯ ತಲೆಗೆ ಗಂಭೀರವಾಗಿ ಗಾಯವಾಗಿದ್ದುದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ಮೇಲಾಗಿ ಆಕೆಯ ಕಾಲುಗಳು ಮುರಿದಿದ್ದವು ಎಂದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಕುಕಟಪಳಿಳ ಪೊಲೀಸ್‌ ಠಾಣೆಯ ಎಸ್‌ಐ ಮಜೀದ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next