Advertisement

ಒಳ್ಳೆಯದಕ್ಕಾಗಿ ಸುಳ್ಳು ಹೇಳುವುದು ತಪ್ಪಲ್ಲ

03:01 PM Mar 22, 2022 | Team Udayavani |

ಬೆಳಗಾವಿ: ಸುಳ್ಳು ಮಾತನಾಡಬಾರದು. ಇದು ನಾವು ಕಲಿತ ಪಾಠ ಮತ್ತು ಹಿರಿಯರು ಹೇಳುವ ಮಾತು. ಆದರೆ ಒಳ್ಳೆಯದಕ್ಕಾಗಿ ಸುಳ್ಳು ಹೇಳುವುದು ತಪ್ಪಲ್ಲ. ರೋಗಿಯ ಒಳ್ಳೆಯದಕ್ಕಾಗಿ ವೈದ್ಯ ಸುಳ್ಳು ಹೇಳುತ್ತಾನೆ. ದುಷ್ಟರಿಂದ ಒಳ್ಳೆಯವರನ್ನು ರಕ್ಷಿಸುವುದಕ್ಕಾಗಿ ಸುಳ್ಳು ಹೇಳುವ ಪ್ರಸಂಗಗಳು ಬರುತ್ತವೆ. ಹೀಗೆ ಒಳ್ಳೆಯದಕ್ಕಾಗಿ ಸುಳ್ಳು ಹೇಳುವುದು ತಪ್ಪಲ್ಲ ಎಂದು ರಾಜೇಶ್ವರಿ ಹಿರೇಮಠ ಹೇಳಿದರು.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಳ್ಳು ತಂದ ಅವಾಂತರ ಹರಟೆ ಕಾರ್ಯಕ್ರಮದ ಸೂತ್ರಧಾರರಾಗಿ ಕಾರ್ಯ ನಿರ್ವಹಿಸಿದ ಅವರು, ನಾವು ಹೇಳುವ ಸುಳ್ಳು ಇತರರಿಗೆ ನೋವು ತರಬಾರದು ಎಂದರು. ದೀಪಿಕಾ ಚಾಟೆ ತಮ್ಮ ಮನೆಯ ಹಿತ್ತಲಲ್ಲಿ ರೊಕ್ಕದ ಮರವಿದೆ. ಮನೆಯಲ್ಲಿದ್ದ ದೊಡ್ಡ ಕಪಾಟಿನಲ್ಲಿ ಬೆಳ್ಳಿ ಬಂಗಾರದ ತಮ್ಮ ಕವಚಗಳು ಇವೆಯೆಂದು ಮುಗ್ಧ ಗೆಳಿತಿಗೆ ಸುಳ್ಳು ಹೇಳಿ ನಂಬಿಸಿ ಮರಳು ಮಾಡಿದ ಘಟನೆಯೆನ್ನು ನವಿರಾದ ಹಾಸ್ಯದೊಂದಿಗೆ ಹೇಳಿ ಜನರನ್ನು ನಗೆಸಿದರು. ಮಹಾದೇವಿ ಅಜವಾನ ಅವರು ಮನೆಗೆ ಬರಲಿದ್ದ ಅತಿಥಿಯೊಬ್ಬರಿಗೆ ತಮ್ಮ ಆರೋಗ್ಯ ಸರಿಯಿಲ್ಲ ಎಂಬ ಒಂದೇ ಒಂದು ಸುಳ್ಳೊಂದನ್ನು ಹೇಳಿದ್ದರಿಂದ ಮುಂದೆ ಆದ ಅವಾಂತರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ನಗೆಯ ಅಲೆ ಎಬ್ಬಿಸಿದರು.

ಕೀರ್ತಿ ಕಾಸರಗೋಡ, ಜಯಶ್ರೀ ನಿರಾಕಾರಿ, ದೀಪಿಕಾ ಕುಲಕರ್ಣಿ ಅವರು ಸುಳ್ಳು ಹೇಳುವುದರಿಂದಾದ ಅವಾಂತರಗಳನ್ನು ಹಂಚಿಕೊಂಡು ಜನರು ಮನಬಿಚ್ಚಿ ನಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಕವಿ ಪಿ. ಬಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ ವಿ ದೀಕ್ಷಿತ, ಶೀತಲ ದೀಕ್ಷಿತ ಉಪಸ್ಥಿತರಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ಭಾಷಣ ಮಾಡಿದರು. ಎಂ. ಬಿ. ಹೊಸಳ್ಳಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next