ಕಲಬುರಗಿ: ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯದ ಜತೆಯಲ್ಲಿ ತಾಂತ್ರಿಕ ಬೆಳೆವಣಿಗೆ ಮತ್ತು ಅದರ ಉಪಯೋಗದ ಕುರಿತು ಮಾಹಿತಿ ನೀಡುವಂತೆ ಡಿಡಿಪಿಐ ಶಾಂತನಗೌಡ ಪಾಟೀಲ ಹೇಳಿದರು.
ತಾಲೂಕಿನ ಕಡಣಿ ಗ್ರಾಮದಶಂಕರಲಿಂಗೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಾರ್ಷಿಕೋತ್ಸವ ಹಾಗೂ ಲಿಂ| ಕಲ್ಯಾಣರಾವ ನರಸಪ್ಪಗೌಡ ಮಾಲಿಪಾಟೀಲ ಅವರ ಸ್ಮರಣೋತ್ಸವದ ನಿಮಿತ್ತ ಕೊಡಮಾಡುವ “ಕಲ್ಯಾಣ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಭಾರತದಲ್ಲಿ ತಂತ್ರಜ್ಞಾನ ಈಗನಾಗಾಲೋಟದಲ್ಲಿ ಸಾಗುತ್ತಿದೆ. ಅದಕ್ಕೆ ತಕ್ಕಂತೆ ನಮ್ಮ ಮಕ್ಕಳು ಕೂಡ ಬದಲಾಗಬೇಕು. ಅಂದಾಗಲೇ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರುತಮ್ಮ ಮಕ್ಕಳಿಗೆ ಸಮಗ್ರ ಮಾಹಿತಿ ನೀಡಲು ಮುಂದಾಗಬೇಕು ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಜಿಪಂಅಧ್ಯಕ್ಷೆ ಸುವರ್ಣಾ ಮಲಾಜಿ ಮಾತನಾಡಿದರು. “ಕಲ್ಯಾಣ ಸಿರಿ’ ಪ್ರಶಸ್ತಿಗೆ ಭಾಜನರಾದ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಡಾ| ರಾಜು ಜಿ. ತೆಗ್ಗೆಳ್ಳಿ ಹಾಗೂ ಕಡಣಿ ಗ್ರಾಮದ ಚಂದ್ರಶ್ಯಾ ಹಣಮಂತ ಮಡಿವಾಳ ಅವರಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರಸಲಾವಿತು.
ಮೆಟ್ರಿಕ್‌ನಲ್ಲಿ ಅಧಿಕ ಅಂಕ ಪಡೆದ ಭಾಗ್ಯಶ್ರೀ ರುಕ್ಕಪ್ಪ ಕೊಳ್ಳಿ, ಅಪೂರ್ವ ವಿಶ್ವನಾಥ ಕಲಬುರಗಿ, ರಂಜಿತಾ ಮಲ್ಲಣ್ಣ ಎಲ್ದಿ ಅವರನ್ನು ಗೌರಸಲಾಯಿತು. ಉತ್ತರ ವಲಯದ ಖಾಸಗಿ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವ ಕಾಂದೆ, ಶಿಕ್ಷಣ ಇಲಾಖೆಯ ನಿತ್ಯಾನಂದ ಎಸ್. ಮಠ,
ಶಿಕ್ಷಣ ಸಂಯೋಜಕ ಶಿವಾನಂದ ಸ್ಥಾವರಮಠ, ಸಿಆರ್‌ಪಿ ಭಗವಂತರಾವ, ಶಿಕ್ಷಕರಾದ ಭೀಮಾಶಂಕರ ಸಿದ್ದಣಗೋಳ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಂ.ಸಿ. ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಸಿದ್ದಣ್ಣಗೌಡ ಮಾಲಿಪಾಟೀಲ, ಮಾರ್ಗದರ್ಶಿ ಶರಣಗೌಡ ಎಲ್. ಮಾಲಿಪಾಟೀಲ ಇದ್ದರು.
ಶಿಕ್ಷಕಿ ಕಾಂಚನಾ ಶಾಲಾ ವಾರ್ಷಿಕ ವರದಿ ವಾಚನ ಮಾಡಿದರು. ಶಿಕ್ಷಕಿ ನಿರ್ಮಲಾ ಸಿದ್ದಣಗೋಳ ಸ್ವಾಗತಿಸಿದರು. ಪ್ರಶಸ್ತಿ ಪುರಸ್ಕೃತರ ಹಿರಿಯ ಪತ್ರಕರ್ತ ಗುಂಡೂರಾವ ಕಡಣಿ ಪರಿಚಯಿಸಿದರು.ಶಿಕ್ಷಕ ಮಲ್ಲೇಶಪ್ಪ ಇಸರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶಿವಗುಂಡಪ್ಪ ಸಿದ್ದಣಗೋಳ ವಂದಿಸಿದರು.