Advertisement

ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಿಳಿಸಿ

09:04 AM Feb 16, 2019 | |

ಇಂಡಿ: ತಾಲೂಕಿನ ಜನತೆ ನನಗೆ 40 ವರ್ಷಗಳ ಕಾಲ ರಾಜಕೀಯವಾಗಿ ಬೆಳೆಸಿದ್ದಾರೆ. ನನ್ನ ಜೀವನದ ಕೊನೆಯವರೆಗೂ ನಮ್ಮ ತಾಲೂಕಿನ ಜನತೆಯ ಋಣ ಮರೆಯುವುದಿಲ್ಲ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು. ಪಟ್ಟಣದ ವಿಜಯಪುರ ರಸ್ತೆಯ ಶಂಕರ ಪಾರ್ವತಿ ಸಭಾ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕರ್ನಾಟಕ ರಾಜ್ಯದಲ್ಲಿ ಅನೇಕ ಮಹಾನ್‌ ಸಾಧು ಸಂತರು, ಶರಣರು, ದಾರ್ಶನಿಕ ಯುಗ ಪುರುಷರು ನಾಡಿನಲ್ಲಿ ಜನ್ಮ ತಾಳಿದ್ದಾರೆ. 12ನೇ ಶತಮಾನದ ಅಣ್ಣ ಬಸವಣ್ಣ ನಾಡಿನಲ್ಲಿ ಸಂಸ್ಕಾರಯುತ ಜೀವನಕ್ಕೆ ತಮ್ಮದೆಯಾದ ಸಂದೇಶ ನೀಡಿದ್ದಾರೆ. ನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ಬೈದವರೆಲ್ಲ ಬಂಧುಗಳು, ನನ್ನ ಅಣ್ಣ ತಮ್ಮಂದಿರು ಎಂದು ತಿಳಿದಿರುವೆ.

ಬೈಯಿಸಿಕೊಂಡವರು ರಾಜಕಾರಣದಲ್ಲಿ ಬೆಳೆಯುತ್ತಾರೆ. ದ್ವೇಷದ ರಾಜಕಾರಣ ಮಾಡಿಲ್ಲ. ಪ್ರೀತಿಯಿಂದ ಎಲ್ಲರನ್ನೂ ಗೌರವಿಸಿದ್ದೇನೆ. ನಾನು ದಲಿತ ಸಮಾಜದ ವ್ಯಕ್ತಿಯಾಗಿದ್ದರೂ ಸಹಿತ ಎಲ್ಲಿಯೂ ಅಂತಹ ಭಾವದಿಂದ ನನಗೆ ಯಾರೂ ಕಂಡಿಲ್ಲ. ಕೇಂದ್ರ ಸರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸಚಿವನಾಗಿರುವದು ನನ್ನ ಭಾಗ್ಯ. ಇಡಿ ವಿಶ್ವವೇ ಮೆಚ್ಚುವಂತ ನಾಯಕ ಎಂದು ಮುಲಾಯಂ ಸಿಂಗ್‌ ಯಾಧವರವರು ಸದನದಲ್ಲಿಯೇ ಗುಣಗಾಣ ಮಾಡಿದ್ದಾರೆ. ಇನ್ನೊಮ್ಮೆ ಮೋದಿ ಪ್ರಧಾನಿಯಗುತ್ತಾರೆ ಎಂದು ಭವಿಷ್ಯ ನುಡಿದ್ದಾರೆ.
 
ನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಇಂತಹವರ ಮಾರ್ಗದರ್ಶನದಲ್ಲಿ ಸಸಿಯಾದ ನನಗೆ ಒಳ್ಳೆ ಮಾರ್ಗದರ್ಶನ ಮಾಡಿ ಇಂದು ದೊಡ್ಡ ಹೆಮ್ಮರವಾಗಿ ಬೆಳೆಸಿದ್ದಾರೆ. ನಾನು ಅನೇಕ ಜನಪರ ಕಾರ್ಯಗಳು ಮಾಡಿದ್ದೇನೆ ಆದರೆ ಪ್ರಚಾರ ಪ್ರೀಯನಾಗಿ ಎಲ್ಲಿಯೂ ಹೇಳಿಕೊಂಡಿಲ್ಲ, ಮುಂದೆಯೂ ಹೇಳುವುದಿಲ್ಲ. ನಾನು ಮಾಡಿರುವ ಕಾರ್ಯಗಳು ಭಗವಂತನ ಮೇಲೆ ಬಿಡುತ್ತೇನೆ. ನಾನು ದೇವರನ್ನು ನಂಬಿದ್ದೇನೆ ದೇವರು ಎಂದಿಗೂ ಕೈ ಬಿಟ್ಟಿಲ್ಲ. 

ನಾನು ಯಾವ ಕನಸು ಕಂಡಿದ್ದೇನೆ ಎಲ್ಲವೂ ಈಡೇರಿದೆ. ಮುಂದು ಸಹಿತ ಈಡೇರುವ ದಿನಗಳು ಸನ್ನಿಹಿತವಾಗಿದೆ. ನರೇಂದ್ರ ಮೋದಿಯರು ಬಡವರ ದೀನ ದಲಿತ ಪರವಾದ ಅನೇಕ ಯೋಜನೆಗಳು ಜಾರಿ ಮಾಡಿದ್ದಾರೆ. ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು. ಬರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ಬೂತ್‌ ಮಟ್ಟದಿಂದ ಸಂಘಟನೆ ಮಾಡಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಗಟ್ಟಿಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಪಂಚಪ್ಪ ಕಲಬುರ್ಗಿ, ಆರ್‌.ಎಸ್‌. ಪಾಟೀಲ ಕೂಚಬಾಳ, ರವಿಕಾಂತ ಬಗಲಿ, ದಯಾಸಾಗರ ಪಾಟೀಲ, ಮುತ್ತು ದೇಸಾಯಿ, ಶೀಲವಂತ ಉಮರಾಣಿ , ಸಿದ್ದಲಿಂಗ ಹಂಜಗಿ, ಎಸ್‌.ಎ. ಪಾಟೀಲ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಿಲ ಜಮಾದಾರ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next