Advertisement
ಅವರು ಮಂಗಳವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಮಂಗಳೂರು ವಿಭಾಗ ವ್ಯಾಪ್ತಿಯ ಅಂಚೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಅಂಚೆ ಇಲಾಖೆಗೆ ನಾಗರಿಕರನ್ನು ಮತ್ತಷ್ಟು ಸೆಳೆಯುವ ಸಲುವಾಗಿ ಇ-ಮಾರುಕಟ್ಟೆ ಯೋಜನೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ಆದರೆ ಅಂಚೆ ಇಲಾಖೆಯ ಅ ಧಿಕಾರಿಗಳು ಇದರಲ್ಲಿ ಯಾವುದೇ ಪ್ರಗತಿಯನ್ನು ತೋರಿಸಿಲ್ಲ. ಬೆಂಗಳೂರಿನಲ್ಲಿ ಇ-ಮಾರುಕಟ್ಟೆ ಯೋಜನೆ ಜಾರಿಯಾಗಿದ್ದರೂ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನಗೊಳ್ಳದಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.
ಕರಾವಳಿಯಲ್ಲಿ ಸಾಕಷ್ಟು ಸಣ್ಣ ಉದ್ದಿಮೆಗಳಿವೆ. ಬೈಕಂಪಾಡಿ, ಯೆಯ್ನಾಡಿ ಪ್ರದೇಶಗಳಿಗೆ ಭೇಟಿ ನೀಡಿ ಕೈಗಾರಿಕೆಗಳ ಜತೆಗೆ
ಮಾತುಕತೆ ನಡೆಸಿದರೆ, ಇ-ಮಾರುಕಟ್ಟೆ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಬಹುದು. ಈ ನಿಟ್ಟಿನಲ್ಲಿ ಜನತೆಗೂ ಸೌಲಭ್ಯದ ಬಗ್ಗೆ ಮಾಹಿತಿ ನೀಡುವ ಅಗತ್ಯವಿದೆ. ಆದ್ದರಿಂದ ಅಂಚೆ ಇಲಾಖೆಯಿಂದ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಅವರು ಸಲಹೆ ಮಾಡಿದರು. ಅಧಿಕಾರಿಗಳ ಸಭೆ ನಡೆಸಿ
ಸುಕನ್ಯಾ ಸಮೃದ್ಧಿ ಹಾಗೂ ಪ್ರಧಾನ ಮಂತ್ರಿ ವಿಮಾ ಯೋಜನೆಗೆ ಆದಷ್ಟು ಹೆಚ್ಚಿನ ಜನರನ್ನು ಸೇರಿಸಬೇಕು. ಗ್ರಾಮೀಣ ಭಾಗಗಳ ಪ್ರತಿ ಬೂತ್ ಮಟ್ಟದಲ್ಲಿ ಅಂಚೆ ಕಚೇರಿಗಳು ಇರುತ್ತವೆ. ಅಲ್ಲದೆ ಪೋಸ್ಟ್ ಮ್ಯಾನ್‌ಗಳಿಗೆ ಪ್ರತಿಯೊಂದು ಮನೆಯ ಪರಿಚಯ ಇರುತ್ತದೆ. ಹಾಗಿರುವಾಗ ಈ ಯೋಜನೆಗಳು ಹೆಚ್ಚಿನ ಮನೆಗಳನ್ನು ಒಳಗೊಳ್ಳುವಂತೆ ಸುಲಭದಲ್ಲಿ ಮಾಡಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪೋಸ್ಟ್ ಮ್ಯಾನ್ ಹಾಗೂ ಅಂಚೆ ಕಚೇರಿಗಳ ಅ ಧಿಕಾರಿ ಗಳಿಗೆ ಸಭೆ ನಡೆಸಿ ಗುರಿ ನಿಗದಿಪಡಿಸಲು ಸಂಸದರು ಸೂಚಿಸಿದರು.
Related Articles
Advertisement
ಅಂಚೆ ಕಚೇರಿಯಲ್ಲಿ ಇ-ಪಾವತಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಶ್ರಮಿಸುವಂತೆ ನಳಿನ್ ಕುಮಾರ್ ಸೂಚನೆ ನೀಡಿದರು.
ಅಂಚೆಚೀಟಿ ರಹಿತ ವ್ಯವಸ್ಥೆ ಜನರಿಗೆ ತಿಳಿಸಿಅಂಚೆ ಚೀಟಿಯನ್ನು ಲಗತ್ತಿಸದೆ ಅಂಚೆ ಬಡವಾಟೆ ಮಾಡುವ ಹೊಸ ವಿಧಾನದ ಬಗ್ಗೆ ಜನತೆಗೆ ಹೆಚ್ಚಿನ ಪರಿಚಯ ಇಲ್ಲ. ಬ್ರಹ್ಮಕಲಶೋತ್ಸವ ಮುಂತಾದ ಧಾರ್ಮಿಕ ಸಂದರ್ಭಗಳಲ್ಲಿ ಅಂಚೆ ಇಲಾಖೆಯ ಈ ಸೌಲಭ್ಯವನ್ನು ಜನತೆಗೆ ಪರಿಚಯಿಸಲು ಅಂಚೆ ಅಧಿಕಾರಿಗಳು ಮುಂದಾಗಬೇಕು. ವಿಶೇಷ ಕಾರ್ಯಕ್ರಮಗಳ ವೇಳೆ ಅಂಚೆ ಚೀಟಿ ಹಾಗೂ ವಿಶೇಷ ಅಂಚೆ ಕವರ್‌ಗಳನ್ನು ಹೊರತರುವ ಬಗ್ಗೆ ಆಸಕ್ತಿಯನ್ನು ತೋರಿಸಬೇಕು ಎಂದು ಸಂಸದರು ಸಲಹೆ ಮಾಡಿದರು.